ಶಿರಾಡಿ: ಪಿಕ್‌ಅಪ್, ಕಾರು ಡಿಕ್ಕಿ -ವ್ಯಕ್ತಿಗೆ ಗಾಯ

0

ನೆಲ್ಯಾಡಿ: ಕಾರು ಹಾಗೂ ಬೊಲೆರೋ ಪಿಕ್‌ಅಪ್ ನಡುವೆ ಡಿಕ್ಕಿ ಸಂಭವಿಸಿ ಪ್ರಯಾಣಿಕರೋರ್ವರು ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕು ಶಿರಾಡಿ ಗ್ರಾಮದ ಎಸ್.ಆರ್.ಎಸ್. ಪೆಟ್ರೋಲ್ ಪಂಪ್ ಸಮೀಪ ಅ.1ರಂದು ಮಧ್ಯಾಹ್ನ ನಡೆದಿದೆ.


ಮಂಗಳೂರಿನಿಂದ ಬೆಂಗಳೂರು ಕಡೆಗೆ ಪ್ರವೀಣ್ ಜಿ. ಸಾಲ್ಯಾನ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಶಿರಾಡಿ ಗ್ರಾಮದ ಎಸ್‌ಆರ್‌ಎಸ್ ಪೆಟ್ರೋಪ್ ಸಮೀಪ ಗಂಗಾಧರ್ ಎನ್. ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೊಲೆರೋ ಪಿಕ್‌ಅಪ್‌ಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಡಿಕ್ಕಿಯ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸ್ಯಾಮಸನ್ ಪ್ರಶಾಂತ್ ಎಂಬವರು ಗಾಯಗೊಂಡಿದ್ದು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆ ಕುರಿತಂತೆ ಬೊಲೆರೋ ಪಿಕ್‌ಅಪ್ ಚಾಲಕ ಗಂಗಾಧರ್ ಎನ್.ಎಂಬವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here