ಸವಣೂರು ಗ್ರಾಮ ಪಂಚಾಯತ್ ವಿಶೇಷ ಗ್ರಾಮ ಸಭೆ

0

ಪುತ್ತೂರು: ಸವಣೂರು ಗ್ರಾ.ಪಂ, ಕಚೇರಿಯಲ್ಲಿ ವಿಶೇಷ ಗ್ರಾಮ ಸಭೆ, ಸ್ವಚ್ಛತಾ ಪ್ರತಿಜ್ಞೆ ಹಾಗೂ ಸವಣೂರು ಮಾಂತೂರು ಶಾಂತಿನಗರದಿಂದ-ಸವಣೂರು ಮುಖ್ಯ ಪೇಟೆ-ಬಸದಿ ವಠಾರ-ರೈಲ್ವೇ ಗೇಟ್‌ ವರೆಗೆ ಸ್ವಚ್ಚತಾ ಕಾರ್ಯಕ್ರಮವನ್ನು ಅ. 2 ರಂದು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಯುವಕ ಮಂಡಲ ಸವಣೂರು,ಆಲ್‌ ನೂರು ಯೂತ್‌ ಪೆಡರೇಶನ್‌ ಚಾಪಳ್ಳ, ಶೌರ್ಯ ವಿಪತ್ತು ವಿರ್ವಹಣಾ ಘಟಕ ಸವಣೂರು, ಕಿರಿಯ ಆರೋಗ್ಯ ಸಹಾಯಕರು,ಆಶಾ ಕಾರ್ಯಕರ್ತರು, ಆಟೋ ಚಾಲಕರಾದ ತಾರೇಶ್‌,ಜಿದಾನಂದ,ಇಬ್ರಾಹಿಂ. ನಿಕಟ ಪೂರ್ವ ಗ್ರಾಮ ಪಂಚಾಯತ್ ‌ ಅಧ್ಯಕ್ಷರು/ ಸದಸ್ಯರುಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿಗಳು, ಗ್ರಾ.ಪಂ.ಪುನರ್ವಸತಿ ಕಾರ್ಯಕರ್ತ, ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸ್ವಚ್ಚತೆಯಲ್ಲಿ ಭಾಗವಹಿಸಿದ ಅಟೋ ಚಾಲಕರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here