







ಪುತ್ತೂರು: ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಪ್ರವರ್ತಕರು, ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಸಾರಥ್ಯದಲ್ಲಿ ಅಶೋಕ ಜನ-ಮನ-2026 ದೀಪಾವಳಿ ಪ್ರಯುಕ್ತ ವಸ್ತ್ರ ವಿತರಣೆ ಕಾರ್ಯಕ್ರಮ ನವೆಂಬರ್ 8ರಂದು ನಡೆಯಲಿದೆ.


ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ 10 ಬಡ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಲು ಉದ್ದೇಶಿಸಲಾಗಿದೆ.



ಕೃಷಿಯಲ್ಲಿ ವಿಶಿಷ್ಟ ಸಾಧನೆ ಮಾಡಿದವರು, ಬೀಡಿ ಕಟ್ಟಿ ಅಥವಾ ಹೈನುಗಾರಿಕೆಯಿಂದ ಜೀವನ ನಡೆಸುತ್ತಿರುವವರು, ಅನಾರೋಗ್ಯ ಪೀಡಿತ ಹೆತ್ತವರ ಆರೈಕೆ ಮಾಡುತ್ತಿರುವ ಮಕ್ಕಳು, ಹಾಸಿಗೆಯಲ್ಲಿರುವವರ ಆರೈಕೆ ಮಾಡುತ್ತಿರುವ ಪೋಷಕರು, ಬುಟ್ಟಿ ಹೆಣೆದು ಜೀವನ ಸಾಗಿಸುತ್ತಿರುವ ಕೊರಗ ಸಮಾಜದವರು, ಕುಂಬಾರರು, ಸೇವಾ ಮನೋಭಾವದ ಆಟೋ ಚಾಲಕರು, ಉಚಿತ ಸೇವೆ ನೀಡುತ್ತಿರುವ ನಾಟಿ ವೈದ್ಯರು, ಹಿರಿಯ ಕೂಲಿ ಕಾರ್ಮಿಕರು ಮುಂತಾದ ಸಮಾಜದ ಕಟ್ಟಕಡೆಯ ಬಡ ಸಾಧಕರ ಮಾಹಿತಿ ಇದ್ದಲ್ಲಿ ಅಕ್ಟೋಬರ್ 31ರೊಳಗೆ ಸಂಕ್ಷಿಪ್ತ ಮಾಹಿತಿಯೊಂದಿಗೆ 8105672143, 9008149987, 8296915918 ಸಂಖ್ಯೆಯನ್ನು ಸಂಪರ್ಕಿಸುವಂತೆ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಆರ್. ಶೆಟ್ಟಿ ಶಾಂತಿನಗರ ತಿಳಿಸಿದ್ದಾರೆ.










