ಈಶ್ವರಮಂಗಲ: ಬೈಕ್, ಪಿಕಪ್ ಜೀಪು ಡಿಕ್ಕಿ

0

ಪುತ್ತೂರು: ಈಶ್ವರಮಂಗಲ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಳಿ ಬೈಕ್ ಮತ್ತು ಪಿಕಪ್ ಜೀಪು ನಡುವೆ ಡಿಕ್ಕಿ ಸಂಭವಿಸಿದ ಘಟನೆ ಅ.1ರಂದು ನಡೆದಿದೆ.

ಬೈಕ್ ಸವಾರ ಸುಳ್ಯದ ಕೊಡಿಯಾಲ ನಿವಾಸಿ ಸುದೇಶ್(21ವ) ಗಾಯಾಳು. ಅವರು ಚಲಾಯಿಸುತ್ತಿದ್ದ ಬೈಕ್ ಮತ್ತು ಪುರಂದರ ಎಂಬವರು ಚಲಾಯಿಸುತ್ತಿದ್ದ ಪಿಕಪ್ ಜೀಪು ನಡುವೆ ಈಶ್ವರಮಂಗಲದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಳಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸುದೇಶ್ ಅವರನ್ನು ಮಂಗಳೂರು ಪಾಧರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here