







ಪುತ್ತೂರು : ಪಡೀಲ್ ಚೈತನ್ಯ ಮಿತ್ರವೃಂದದ ವತಿಯಿಂದ ಮಹಾತ್ಮಾಗಾಂಧಿ ಜಯಂತಿ ಆಚರಣೆ ನಡೆಯಿತು. ಮಿತ್ರವೃಂದದ ಅಧ್ಯಕ್ಷ ಮಂಜುನಾಥ್ ಎಮ್. ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರು, ಹಾಗೂ ಸುದ್ದಿ ಸೌಹಾರ್ದ ಸಹಕಾರಿ ಸಂಘದ ಪ್ರಬಂಧಕ ಗಣೇಶ್ ಬದಿನಾರು ಮಹಾತ್ಮಾ ಗಾಂಧೀಜಿ ಹಾಗೂ ಭಾರತ ಮಾತೆಯ ಭಾವಚಿತ್ರ ಕ್ಕೆ ದೀಪ ಬೆಳಗಿಸಿ, ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಂಚಾಲಕ ಸಂಪತ್ ಕುಮಾರ್ ಜೈನ್ ಸಂದೇಶ ನೀಡಿದರು.
ಚಂದ್ರಶೇಖರ್ ಪಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪುರಂದರ್ ಪಡೀಲ್ ವಂದಿಸಿದರು. ಜತೆ ಕಾರ್ಯದರ್ಶಿ ಗಣೇಶ್ ಬಿ. ಹಾಗೂ ಖಜಾಂಚಿ ರಮೇಶ್ ಬಿ ಸಹಕರಿಸಿದರು.












