ಬಲ್ಯ: ಸ್ಕೂಟರ್, ಬೈಕ್ ಡಿಕ್ಕಿ-ಸವಾರನಿಗೆ ಗಾಯ

0

ನೆಲ್ಯಾಡಿ: ಸ್ಕೂಟರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಬಲ್ಯ ಕ್ರಾಸ್‌ನಲ್ಲಿ ಸೆ.29ರಂದು ನಡೆದಿದೆ.


ನೆಲ್ಯಾಡಿ ನಿವಾಸಿ ಮಹಮ್ಮದ್ ಶರೀಫ್ (67ವ.) ಗಾಯಗೊಂಡವರು. ಇವರು ಸೆ.29ರಂದು ಸ್ಕೂಟರ್ ನಲ್ಲಿ ಕಡಬ ಅಡ್ಡಗದ್ದೆ ಎಂಬಲ್ಲಿಗೆ ಹೋದವರು ಸಂಜೆ ಹಿಂತಿರುಗಿ ಮನೆಗೆಂದು ಕಡಬ-ಉಪ್ಪಿನಂಗಡಿ ರಸ್ತೆಯಲ್ಲಿ ಬಂದವರು ಬಲ್ಯ ಎಂಬಲ್ಲಿ ನೆಲ್ಯಾಡಿ ಕಡೆಗೆ ತಿರುಗುವ ವೇಳೆ ಉಪ್ಪಿನಂಗಡಿ ಕಡೆಯಿಂದ ಕಡಬಕ್ಕೆ ಹೋಗುತ್ತಿದ್ದ ಡಿಸ್ಕವರಿ ಬೈಕ್ ಸವಾರ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿರುವುದಾಗಿದೆ.

ಘಟನೆಯಲ್ಲಿ ಸ್ಕೂಟರ್ ಸವಾರ ಮಹಮ್ಮದ್ ಶರೀಫ್ ಅವರು ವಾಹನ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಅವರನ್ನು ಸ್ಥಳೀಯರು ಉಪಚರಿಸಿ ಆಂಬುಲೆನ್ಸ್‌ನಲ್ಲಿ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ತೇಜಶ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ಮಹಮ್ಮದ್ ಶರೀಫ್ ಅವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here