ಕೂಟೇಲು ಕೃಷ್ಣಪ್ಪ ನಾಯ್ಕ ಹೃದಯಾಘಾತದಿಂದ ನಿಧನ

0

ನಿಡ್ಪಳ್ಳಿ; ಇಲ್ಲಿಯ ಕೂಟೇಲು ನಿವಾಸಿ ಪ್ರಗತಿಪರ ಕೃಷಿಕ ಕೃಷ್ಣಪ್ಪ ನಾಯ್ಕ (59 ವ) ಎಂಬವರು ಹೃದಯಾಘಾತದಿಂದ ಅ.3 ರಂದು ನಿಧನರಾದರು.

ಕಾರ್ಯಕ್ರಮದ ನಿಮಿತ್ತ ಬೆಳಿಗ್ಗೆ ಕೆ.ಎಸ್.ಅರ್.ಟಿ.ಸಿ ಬಸ್ಸಿನಲ್ಲಿ ಪುತ್ತೂರಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಬಸ್ಸು ಇರ್ದೆ ಸಮೀಪಿಸುತ್ತಿದ್ದಾಗ ತೀವ್ರ ಎದೆ ನೋವು ಬಂದು ಕುಸಿದು ಬಿದ್ದರು. ತಕ್ಷಣ ಬಸ್ಸಿನಿಂದ ಇಳಿಸಿ ಆಸ್ಪತ್ರೆಗೆ ಕೊಂಡೊಯ್ದು ಪರೀಕ್ಷಿಸಿದಾಗ ಮೃತ ಪಟ್ಟಿರುವುದಾಗಿ ವೈದ್ಯರು ದೃಡಪಡಿಸಿದರು ಎಂದು ಮನೆಯವರು ತಿಳಿಸಿದ್ದಾರೆ.

ಕೃಷ್ಣಪ್ಪ ನಾಯ್ಕ ಅವರು ಶ್ರೀ ಶಾಂತದುರ್ಗಾ ದೇವಸ್ಥಾನದ ಟ್ರಸ್ಟಿನ ಸದಸ್ಯರಾಗಿದ್ದರು. ಅಲ್ಲದೆ ನಿಡ್ಪಳ್ಳಿ ಗ್ರಾಮ ದೈವಗಳ ಜಾತ್ರೆ ಸಮಯದಲ್ಲಿ ಪಲ್ಲಕ್ಕಿ ಹಿಡಿಯುವ ಚಾಕರಿ ಮಾಡುತ್ತಿದ್ದರು.

 ಮೃತರು ಪತ್ನಿ ಜಯಲಕ್ಷ್ಮಿ, ಪುತ್ರ ಪ್ರಸಾದ್, ಪುತ್ರಿ ದಿವ್ಯಾ, ಸಹೋದರರಾದ ನಾರಾಯಣ ನಾಯ್ಕ, ನಾರ್ಣಪ್ಪ ನಾಯ್ಕ, ಬಾಬು ನಾಯ್ಕ, ಸಹೋದರಿ ಬೇಬಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಗಳ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಪ್ರವೀಣ್ ಎನ್.ಆರಿಗ ನಿಡ್ಪಳ್ಳಿ ಗುತ್ತು,ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಮತ್ತು ಸದಸ್ಯರು, ಮಾಜಿ ಶಾಸಕ ಸಂಜೀವ ಮಠಂದೂರು,ಹರೀಶ್ ಬಿಜತ್ರೆ,ರಾಜೇಶ್ ಬನ್ನೂರು, ರಾಧಾಕೃಷ್ಣ ಬೋರ್ಕರ್,    ಅವಿನಾಶ್ ರೈ  ಸೇರಿದಂತೆ ಹಲವಾರು ಪ್ರಮುಖರು, ಹಿತೈಷಿಗಳು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here