







ರಾಮಕುಂಜ: ಈಚರ್ ಲಾರಿ ಹಾಗೂ ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಆಟೋ ರಿಕ್ಷಾದಲ್ಲಿದ್ದ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೆ.30ರಂದು ಸಂಜೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ ಗೋಳಿತ್ತಡಿ ಎಂಬಲ್ಲಿ ನಡೆದಿದೆ.


ಕೆದಂಬಾಡಿ ಗ್ರಾಮದ ಘಟ್ಟ ಮನೆ ಜಿ.ಎಂ.ಸಂಶುದ್ದೀನ್ ಎಂಬವರ ಆಟೋ ರಿಕ್ಷಾದಲ್ಲಿ ಕುಂಬ್ರ ನಿವಾಸಿ ಅಬೂಬಕ್ಕರ್ ಹಾಗೂ ಮನ್ಸೂರ್ ಎಂಬವರು ಕೊಯಿಲ ಗ್ರಾಮದ ಆತೂರಿಗೆ ಸವಣೂರು, ಆಲಂಕಾರು ಮಾರ್ಗವಾಗಿ ಬಂದವರು ಆಲಂಕಾರಿನಿಂದ ಕಡಬ-ಉಪ್ಪಿನಂಗಡಿ ರಸ್ತೆಯಲ್ಲಿ ಬರುತ್ತಿದ್ದ ವೇಳೆ ರಾಮಕುಂಜ ಗ್ರಾಮದ ಗೋಳಿತ್ತಡಿ ಎಂಬಲ್ಲಿಗೆ ತಲುಪಿದಾಗ ಅಲ್ಲಿ ರಸ್ತೆ ಎಡ ಬದಿ ನಿಲ್ಲಿಸಿದ್ದ ಈಚರ್ ಲಾರಿಯನ್ನು ಅದರ ಚಾಲಕ ಏಕಾಏಕಿ ಡಾಮಾರು ರಸ್ತೆಗೆ ಚಲಾಯಿಸಿಕೊಂಡು ಬಂದ ಪರಿಣಾಮ ಈಚರ್ ಲಾರಿ ಆಟೋ ರಿಕ್ಷಾಗೆ ಡಿಕ್ಕಿಯಾಗಿದೆ.



ಘಟನೆಯಲ್ಲಿ ರಿಕ್ಷಾ ಚಾಲಕ ಸಂಶುದ್ದೀನ್, ಪ್ರಯಾಣಿಕರಾದ ಅಬೂಬಕ್ಕರ್ ಹಾಗೂ ಮನ್ಸೂರು ಅವರು ಗಾಯಗೊಂಡಿದ್ದು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ಜಿ.ಎಂ.ಸಂಶುದ್ದೀನ್ ನೀಡಿರುವ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.










