







ಮಾಣಿಲ : ಮಾಣಿಲ ಗ್ರಾಮದ ಮುರುವ ಕೊಮ್ಮುಂಜೆ ರಸ್ತೆಯಲ್ಲಿ ಮುರುವ ಬಸ್ ನಿಲ್ದಾಣದಿಂದ ಅಂಗನವಾಡಿ ಬಳಿವರೆಗೆ “ಸ್ವಚ್ಛತೆಯೇ ಸೇವೆ-2026” ಅಭಿಯಾನದಡಿ ಗುರುವಾರದಂದು ಸ್ವಯಂಪ್ರೇರಿತ ಶ್ರಮದಾನ ಕಾರ್ಯಕ್ರಮ ನಡೆಯಿತು.
ಶ್ರಮದಾನದಲ್ಲಿ ಗ್ರಾಮಸ್ಥರಾದ ಚಂದ್ರಶೇಖರ ರಾವ್ ಕೊಮ್ಮುಂಜೆ, ರಾಜಾರಾಮ ನಾಯಕ್ ಮುರುವ, ಬಾಬು ಮೂಲ್ಯ ಮುರುವ, ಭರತ್ ಕುಮಾರ್ ಬೈಕುಂಜ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣ ಕುಮಾರ ಕಮ್ಮಜೆ, ಗ್ರಾ.ಪಂ ಕಾರ್ಯದರ್ಶಿ ರಾಮ ನಾಯ್ಕ ಎಮ್, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಜಗದೀಶ್ ನಾಯಕ್, ಭವಾನಿ.ಪಿ, ಮಮತಾ ಎಸ್, ಅವಿನಾಶ್ ಯಂ, ನೇತ್ರಾವತಿ ಒಕ್ಕೂಟದ ಪೂರ್ಣಿಮ ಬಿ, ಕೃಷಿ ಸಖಿ ಪಾರ್ವತಿ, ಪಶು ಸಖಿ ಬಾಲಮಣಿ, ದಿಶಾ ಕೊಂದಲಕೋಡಿ ಭಾಗವಹಿಸಿದರು.












