ಕುಂಬ್ರದಲ್ಲಿ 4 ನೇ ವರ್ಷದ `ಮಾರ್ನೆಮಿದ ಗೌಜಿ’ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು : ಬಾಂತಲಪ್ಪು ಜನಸೇವಾ ಸಮಿತಿ ಕುಂಬ್ರ ಇದರ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವರ ಸಹಯೋಗದೊಂದಿಗೆ ನಡೆಯಲಿರುವ 4ನೇ ವರ್ಷದ `ಕುಂಬ್ರದ ಮಾರ್ನೆಮಿದ ಗೌಜಿ’ ಆಯ್ದ ಸ್ಥಳೀಯ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಕುಂಬ್ರ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಇತ್ತೀಚೆಗೆ ನಡೆಯಿತು.

ಬಾಂತಲಪ್ಪ ಜನಸೇವಾ ಸಮಿತಿಯ ಗೌರವಾಧ್ಯಕ್ಷ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಅಧ್ಯಕ್ಷರಾದ ರಕ್ಷಿತ್ ರೈ, ಸಂಚಾಲಕರಾದ ಶಶಿಕಿರಣ್ ರೈ, ಪ್ರಧಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಬೊಳ್ಳಾಡಿ, ಉಪಾಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ, ಸದಸ್ಯರಾದ ವಿಶ್ವನಾಥ್ ಗೌಡ ಬೊಳ್ಳಾಡಿ, ಪುರಂದರ ಶೆಟ್ಟಿ ಮುಡಾಲ, ಬಶೀರ್ ಕೌಡಿಚ್ಚಾರ್, ಶೀನಪ್ಪ ನಾಯ್ಕ್ ಬೊಳ್ಳಾಡಿ, ಹರೀಶ್ ರೈ ಮುಗೇರು, ಸಮಿತ್ ರೈ ಕುಂಬ್ರ, ಬದ್ರುನ್ನೀಸಾ ಪರ್ಪುಂಜ, ಶೇಖರ್ ರೈ ಕುರಿಕ್ಕಾರ, ವಸಂತ ಶೆಟ್ಟಿ ಕಲ್ಲಡ್ಕ, ದಿನೇಶ್ ರೈ ಬಡಕೋಡಿ, ಮಹಮ್ಮದ್ ಬೊಳ್ಳಾಡಿ, ಅಜೀಜ್ ನೀರ್ಪಾಡಿ, ರಾಜಶೇಖರ್ ಶೆಟ್ಟಿ ಮುಡಾಲ, ನಾರಾಯಣ ದರ್ಬೆತ್ತಡ್ಕ, ಚೆನ್ನ ಬಿಜಲ, ಹುಕ್ರಪ್ಪ ಬೊಳ್ಳಾಡಿ, ನಳಿನಿ ಸುರೇಶ್ ರೈ ಕುರಿಕ್ಕಾರ ಹಾಗೂ ಹರಿಣಾಕ್ಷಿ ಎರ್ಕ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಅ.17: ಮಾರ್ನೆಮಿದ ಗೌಜಿ, ವೇಷಧಾರಿಗಳ ಗುಂಪು ಸ್ಪರ್ಧೆ
ನವರಾತ್ರಿಯ ವಿಶೇಷ ಆಕರ್ಷಣೆಯಾಗಿರುವ ಸ್ಥಳೀಯ ವೇಷಧಾರಿಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ಮಾರ್ನೆಮಿಯ ಸೊಗಡನ್ನು ಸಂಭ್ರಮಿಸುವ ಮೂಲಕ ಸಂಸ್ಕೃತಿ ಉಳಿಸುವುದು ನಮ್ಮ ಪ್ರಾಮಾಣಿಕ ಪ್ರಯತ್ನ ಎಂಬ ನಿಟ್ಟಿನಲ್ಲಿ ಬಾಂತಲಪ್ಪ ಜನಸೇವಾ ಸಮಿತಿ ಕುಂಬ್ರ ಆರಂಭಿಸಿದ ಕುಂಬ್ರದ ಮಾರ್ನೆಮಿದ ಗೌಜಿ ಯಶಸ್ವಿ 4 ನೇ ವರ್ಷಕ್ಕೆ ಕಾಲಿಟ್ಟಿದ್ದು ಈ ವರ್ಷದ ಗೌಜಿ ಆ. 17 ರಂದು ಕುಂಬ್ರ ಜಂಕ್ಷನ್‌ನಲ್ಲಿ (ಕುಂಬ್ರ ಚೆನ್ನಪ್ಪ ರೈ, ಕುಂಬ್ರ ಜತ್ತಪ್ಪ ರೈ ಸ್ಮಾರಕ ಅಶ್ವತ್ಥ ಕಟ್ಟೆಯ ಬಳಿ)ನಡೆಯಲಿದೆ. ಸ್ಥಳೀಯ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆಯಲ್ಲಿ ಪ್ರಥಮ 2 ಮುಡಿ ಅಕ್ಕಿ, ದ್ವಿತೀಯ ಹಾಗೂ ತೃತೀಯ ತಲಾ 1 ಮುಡಿ ಅಕ್ಕಿ ಹಾಗೂ ಟ್ರೋಫಿ ಹಾಗೇ ಭಾಗವಹಿಸಿದ ಎಲ್ಲಾ ತಂಡಗಳಿಗೂ ನಗದು ಬಹುಮಾನ ನೀಡಲಾಗುತ್ತದೆ.

LEAVE A REPLY

Please enter your comment!
Please enter your name here