ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಲಾಸ್ಯ ಕಿಶನ್ 5 ಪದಕಗಳೊಂದಿಗೆ ಈಜು ಸ್ಪರ್ಧೆಯಲ್ಲಿ ನೂತನ ರಾಷ್ಟ್ರೀಯ ದಾಖಲೆ

0

ಪುತ್ತೂರು: ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 10ನೇ ತರಗತಿಯ ವಿದ್ಯಾರ್ಥಿನಿ ಲಾಸ್ಯ ಕಿಶನ್ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಫಿನ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಲ್ಲಿ ವೈಯಕ್ತಿಕವಾಗಿ 5 ಪದಕಗಳನ್ನು ಪಡೆಯುವುದರೊಂದಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ.

ಈಕೆ ಬಿಫಿನ್ ವಿಭಾಗದ 100 ಮೀ ಮತ್ತು 50 ಮೀನಲ್ಲಿ 2 ಚಿನ್ನದ ಪದಕ, 4×50 ಮೀ ಬಿಫಿನ್ ರಿಲೇಯಲ್ಲಿ 1 ಬೆಳ್ಳಿ ಪದಕ, 50 ಮೀ ಬಿಫಿನ್ ನಲ್ಲಿ 1 ಕಂಚಿನ ಪದಕವನ್ನು ಪಡೆದು ಕಳೆದ ವರ್ಷದ ತನ್ನದೇ ದಾಖಲೆಯನ್ನು ಮುರಿದು ನೂತನ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ಈಕೆ ಕಿಶನ್ ಡಿ. ಪಿ. ಮತ್ತು ದೀನಾ ಕಿಶನ್ ದಂಪತಿ ಪುತ್ರಿ.ಇವರ ಸಾಧನೆಗೆ, ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು, ಶಿಕ್ಷಕೇತರ ವರ್ಗದವರು ಹಾಗೂ ದೈಹಿಕ ಶಿಕ್ಷಣ ವಿಭಾಗ ಅಭಿನಂದನೆ ಸಲ್ಲಿಸಿದೆ.

LEAVE A REPLY

Please enter your comment!
Please enter your name here