







ಪುತ್ತೂರು: ಸವಣೂರು ವಲಯ ಮಟ್ಟದ ಕ್ರೀಡಾಕೂಟವು ಅ.1ರಂದು ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಆಶ್ರಯದಲ್ಲಿ ನಡೆಯಿತು.


ಕಾಣಿಯೂರು, ಸವಣೂರು, ನರಿಮೊಗರು ಮತ್ತು ಕೆಯ್ಯೂರು ಕ್ಲಸ್ಟರ್ ವಿದ್ಯಾರ್ಥಿಗಳು, ತೀರ್ಪುಗಾರರು, ತಂಡದ ವ್ಯವಸ್ಥಾಪಕರು, ಕ್ರೀಡಾಭಿಮಾನಿಗಳು ಸೇರಿ ಒಂದು ಸಾವಿರಕ್ಕಿಂತ ಮಿಕ್ಕಿ ಕ್ರೀಡಾಪಟುಗಳನ್ನು ಒಳಗೊಂಡ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಎಡಪದವು ಇಲ್ಲಿಯ ದೈಹಿಕ ಶಿಕ್ಷಣ ನಿರ್ದೇಶಕ, ರಾಷ್ಟ್ರೀಯ ಕ್ರೀಡಾಪಟು, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪ್ರೇಮನಾಥ ಶೆಟ್ಟಿ ಕಾವುರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನಾಗಿ ಸ್ವೀಕರಿಸಿ ಮುನ್ನೆಡೆಯಬೇಕು ಎಂದು ಹೇಳಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.




ಕ್ರೀಡಾಕೂಟದ ಸಭಾಧ್ಯಕ್ಷತೆಯನ್ನು ವಹಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಸವಣೂರು ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಗಿರಿಶಂಕರ ಸುಲಾಯ, ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿದ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಕಬಡ್ಡಿ ಕ್ರೀಡಾಪಟು ದಿನೇಶ್ ಮೆದು, ಮುಖ್ಯ ಅತಿಥಿಗಳಾದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿಲ್ವಿಯಾ ಆರ್ ಕ್ಯಾಸ್ಟಲಿನೊ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಿವೃತ್ತ ಪ್ರಾಂಶುಪಾಲ ಸೂರ್ಯನಾರಾಯಣ ಬಿ.ವಿ, ಸವಣೂರು ಪದವಿ ಪೂರ್ವ ಕಾಲೇಜು ಕಟ್ಟಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್ ರೈ, ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪದ್ಮಾವತಿ ಎನ್.ಪಿ., ಸವಣೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುವ, ಸರ್ವೆ ಎಸ್.ಜಿ.ಎಂ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಶ್ರೀನಿವಾಸ, ಕಡಬ ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡಂಜಿ, ದ.ಕ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಕೃಷಿ ಪತ್ತಿನ ಸಹಕಾರಿ ಸಂಘದ ತಾರಾನಾಥ ಕಾಯರ್ಗ, ಚಂದ್ರಶೇಖರ, ಕಾರ್ಯ ನಿರ್ವಹಣಾಧಿಕಾರಿ, ಕಡಬ ಜನಜಾಗೃತಿ ವೇದಿಕೆ ಅಧ್ಯಕ್ಷ ನ್ಯಾಯವಾದಿ ಮಹೇಶ್, ರಾಜೀವ್ ಶೆಟ್ಟಿ, ಚಂದ್ರಾವತಿ ಸುಣ್ಣಾಜೆ, ಬಾಬು, ಪುತ್ತೂರು ತಾಲೂಕು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಗ್ರೇಡ್ 2 ಅಧ್ಯಕ್ಷ ಬಾಲಕೃಷ್ಣ ಕೆ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷೆ ಪ್ರವೀಣಾ ರೈ ಪಾಪೆಮಜಲು, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಜಯಂತ, ನಾರಾಯಣ, ಪರಮೇಶ್ವರಿ, ಶಶಿಕಲಾ, ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ ಸವಣೂರು ಅಧ್ಯಕ್ಷ ಚೇತನ್ ಕೋಡಿಬೈಲು, ಪ್ರಾಥಮಿಕ ಶಾಲೆ ವಿಭಾಗದ ನೋಡಲ್ ಅಧಿಕಾರಿ ವನಿತಾ, ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಪುತ್ತೂರು ಉಪಾಧ್ಯಕ್ಷ ತಾರಾನಾಥ, ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಪುತ್ತೂರು ನಿರ್ದೇಶಕ ಬಾಬು ಎಂ, ನಿವೃತ್ತ ಶಿಕ್ಷಕ ಕುಶಾಲಪ್ಪಗೌಡ ಕುದ್ಮಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಹಿರಿಯ ಪದವೀಧರ ಸಹಾಯಕಿ ಶ್ರೀಲತಾ ಸ್ವಾಗತಿಸಿದರು. ಸವಣೂರು ವಲಯದ ನೋಡಲ್ ಹಾಗೂ ಕ್ರೀಡಾ ಕಾರ್ಯದರ್ಶಿ ಮಾಮಚ್ಚನ್ ಎಂ ಸನ್ಮಾನಿತರ ಕಿರು ಪರಿಚಯವನ್ನು ನೀಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಹ ಶಿಕ್ಷಕಿ ರೀನಾ ಎಂ.ಡಿ ಕಾರ್ಯಕ್ರಮ ನಿರೂಪಿಸಿದರು. ನಯನಾ ಜಿ ಪಾಲೇಕರ್ ವಂದಿಸಿದರು. ಸಹ ಶಿಕ್ಷಕರುಗಳಾದ ಕಿಶನ್ ಬಿ ವಿ, ಸರಸ್ವತಿ, ಕವಿತಾ, ಡಾ.ಪವಿತ್ರ ಉಡಪ, ರೇಖಾ, ಇಂದಿರಾ, ವೀಣಾ, ನಯನ್ ಕುಮಾರ್, ಹಾಗೂ ಬಿಎಡ್ ಪ್ರಶಿಕ್ಷಣಾರ್ಥಿಗಳು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.

ಸನ್ಮಾನ/ಅಭಿನಂದನೆ..
ಇತ್ತೀಚೆಗೆ ಜಿಲ್ಲಾ ಪ್ರಾಂಶುಪಾಲರ ಎಸೋಸಿಯೇಷನ್ ವತಿಯಿಂದ ಜಿಲ್ಲಾ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತರಾದ ಪ್ರೇಮನಾಥ ಶೆಟ್ಟಿ ಕಾವು ಇವರನ್ನು ಕ್ರೀಡಾಕೂಟದ ಸಂಘಟನೆಯ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು. ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಹಾಗೂ ಕ್ರೀಡಾಕೂಟದ ಯಶಸ್ವಿಗೆ ಸಹಕರಿಸಿದ ನಯನ್ ಕುಮಾರ್ ಇವರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು.










