







ಪುತ್ತೂರು: ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಮುಂಭಾಗದಲ್ಲಿ ನಡೆದ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧನ್ಯತಾ ಸಭೆ ಹಾಗೂ ಲೆಕ್ಕಪತ್ರ ಮಂಡನೆಯು ಅ.4ರಂದು ಪುರುಷರಕಟ್ಟೆ ಮಹಾಲಿಂಗೇಶ್ವರ ಕಟ್ಟೆ ಮುಂಭಾಗದಲ್ಲಿ ನಡೆಯಿತು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಮುಂಡೋಡಿ ಮಾತನಾಡಿ, 26ನೇ ವರ್ಷದ ಗಣೇಶೋತ್ಸವವಯ ಬಹಳಷ್ಟು ಯಶಸ್ಸಿಯಾಗಿ ನಡೆದಿದ್ದು ದೇಣಿಗೆ ನೀಡಿದ ದಾನಿಗಳಿಗೆ ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಅವರು ಕೃತಜ್ಞತೆ ಸಲ್ಲಿಸಿದರು.
ಧನ ಸಹಾಯ:
ಗಣೇಶೋತ್ಸವದಲ್ಲಿ ಉಳಿಕೆಯಾದ ಮೊತ್ತದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಸಮಿತಿ ಸದಸ್ಯ ರೋಹಿತ್ ಕೋಟ್ಯಾನ್ ಶಿಬರ ಇವರಿಗೆ ಸಮಿತಿಯಿಂದ ರೂ.25,000 ಧನ ಸಹಾಯವನ್ನು ಅವರ ಮನೆಗೆ ತೆರಳಿ ನೀಡಲಾಯಿತು.
ಗಣೇಶೋತ್ಸವ ಸಮಿತಿ ಸ್ಥಾಪಕ ಅಧ್ಯಕ್ಷ ಬಿ.ಕೆ ಶ್ರೀನಿವಾಸ್ ರಾವ್, ಕಾರ್ಯದರ್ಶಿಯಾದ ದೇವಿಪ್ರಸಾದ್ ಪ್ರಭು ಉದಯ ಭಾಗ್ಯ, ಖಜಾಂಜಿ ರವಿಕೊಡಿಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಪೂರ್ವ ಅಧ್ಯಕ್ಷರಾದ ರವಿ ಮಾಯಂಗಳ, ವಸಂತ ಪೂಜಾರಿ ಕಲರ್ಪೆ, ವಿಶ್ವನಾಥ ಪುರುಷ, ಉಮೇಶ್ ಎಂ, ಶರತ್ಚಂದ್ರ ಬೈಪಾಡಿತ್ತಾಯ, ಸಮಿತಿ ಸದಸ್ಯರಾ ರಾಘವೇಂದ್ರ ನಾಯಕ್, ರವೀಂದ್ರ ರೈ ನೆಕ್ಕಿಲು, ಸಂತೋಷ್ ಎಂ ಮುಕ್ವೆ, ವಿಶ್ವನಾಥ್ ಬಲ್ಯಾಯ ಮುಂಡೋಡಿ, ಸತೀಶ್ ಜೋಗಿ ಇಂದಿರಾನಗರ, ಬೇಬಿಜಾನ್ ಕೂಡ ರಸ್ತೆ, ದಿನೇಶ್ ಪೂಜಾರಿ ಇಂದಿರಾ ನಗರ, ಸತೀಶ್ ಪುರುಷರಕಟ್ಟೆ, ಲಕ್ಷ್ಮೀಶ ಭಂಡಾರಿ, ಅನಿಲ್ ಪ್ರಭು ಉದಯ ಭಾಗ್ಯ, ಚಂದ್ರಕಾಂತ ಜೋಗಿ, ಹರೀಶ್ ದೇವಾಡಿಗ ಮುಕ್ವೆ, ಜಗದೀಶ್ ಪರಕಮೆ, ರಮೇಶ್ ಪೂಜಾರಿ ಕೈದಾಡಿ, ಜನಾರ್ದನ ಪೂಜಾರಿ ಕೂಡುರಸ್ತೆ, ಸುರೇಶ್ ಸಾಲಿಯಾನ್ ಕೊಡಂಕಿರಿ, ರಾಜು ಕೊಡಿಮಜಲು, ಧನಂಜಯ ಆಚಾರ್ಯ ಪುರುಷರಕಟ್ಟೆ, ನವೀನ್ ಪೂಜಾರಿ ಸೇರಾಜೆ, ಶ್ರೀಕರಿ ಡಿ ಪಂಡಿತ್ ಪುರುಷರಕಟ್ಟೆ, ಪದ್ಮ ರಾಜೀವ್ ಮುಂಡೋಡಿ, ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.












