









ಪುತ್ತೂರು: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ನ 2025-26ನೇ ಆರ್ಥಿಕ ವರ್ಷದಲ್ಲಿ 2 ಕೋಟಿ ರೂ. ಪ್ರೀಮಿಯಂ ವ್ಯವಹಾರ ಮಾಡಿ, ಪುತ್ತೂರು ಬ್ರಾಂಚ್ಗೆ ಮೊದಲ ಸ್ಥಾನವನ್ನು ಪಡೆದು ಪ್ಲಾಟಿನಂ ಸ್ಟಾರ್ ಅಡ್ವೈಸರ್ ಆಗಿ ನಿಶಾಂತ್ ರೈ ಆಯ್ಕೆಯಾಗಿದ್ದಾರೆ.



ಇವರು ಪ್ರಸ್ತುತ ಪುತ್ತೂರಿನ ಉರ್ಲಾಂಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಕಡಬ, ಕುಂಬ್ರ, ಈಶ್ವರಮಂಗಲದಲ್ಲಿ ಬ್ರಾಂಚ್ ಹೊಂದಿದ್ದಾರೆ.
ಇವರು ಈ ಹಿಂದೆಯೂ 2022-23 ಮತ್ತು 2023-24ರಲ್ಲಿ 7 ಸ್ಟಾರ್ ಅಡ್ವೈಸರ್ ಆಗಿ, 2024-25ರಲ್ಲಿ ಗೋಲ್ಡ್ ಸ್ಟಾರ್ ಅಡ್ವೈಸರ್ ಆಗಿ ಆಯ್ಕೆಯಾಗಿದ್ದರು.










