







ಪುತ್ತೂರು : ಪುಣ್ಚಪ್ಪಾಡಿ ಗ್ರಾಮದ, ಸೋಂಪಾಡಿ ಎಂಬಲ್ಲಿರುವ ಶ್ರೀ ಮಾರಿಯಮ್ಮ ಮತ್ತು ಪರಿವಾರ ದೈವಗಳ ನ 19 ಮತ್ತು 20 ರಂದು ನಡೆಯುವ ಬ್ರಹ್ಮಕಲಶದ ಪೂರ್ವಭಾವಿ ಸಭೆಯು ಅ 1 ರಂದು ಸೋಂಪಾಡಿಯಲ್ಲಿ ಜರಗಿತು.


ಸಭೆಯಲ್ಲಿ ಬ್ರಹ್ಮಕಲಶ ಮತ್ತು ಜೀರ್ಣೋದ್ಧಾರದ ಬಗ್ಗೆ ಪೂರ್ವ ಸಿದ್ಧತೆಯ ಕುರಿತು ಸಭೆಯಲ್ಲಿ ಚರ್ಚಿಸಿ ಜೀರ್ಣೋದ್ಧಾರ ಕೆಲಸ ಕಾರ್ಯಗಳು ವೇಗವಾಗಿ ಸಾಗುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಶ್ರೀ ಮಾರಿಯಮ್ಮ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಗೌರವಾಧ್ಯಕ್ಷರಾದ ಗಿರಿಶಂಕರ ಸುಲಾಯ, ಸುದರ್ಶನ್ ನಾಯಕ್ ಕಂಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಕೆ ಸವಣೂರು, ಜೊತೆ ಕಾರ್ಯದರ್ಶಿ ತಾರನಾಥ ಕಾಯರ್ಗ, ಕೋಶಾಧಿಕಾರಿ ವಿಜಯ ಸೋಂಪಾಡಿ ಗೌರವ ಸಲಹೆಗಾರಾರದ ದಿನೇಶ್ ಮೆದು, ಸುರೇಶ್ ರೈ ಸೂಡಿಮುಳ್ಳು, ರವೀಶ್ ಭಟ್ ತೆಂಕಿಲ, ಸದಸ್ಯರಾದ ಚೇತನ್ ಕುಮಾರ್ ಕೋಡಿಬೈಲು, ಜಯಶ್ರೀ ಕುಚ್ಚೆಜಾಲು, ಯಶೋಧ ನೂಜಾಜೆ, ಶೇಷಪ್ಪ ಆಚಾರ್ಯ, ಶ್ರೀ ಮಾರಿಯಮ್ಮ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಗಿರೀಶ್ ಎಂ, ಟ್ರಸ್ಟಿಗಳಾದ ಗೋಪಾಲ, ಆನಂದ, ಲೋಕೇಶ, ವೇದಾವತಿ,ಜಯಂತಿ, ಸದಸ್ಯರುಗಳಾದ ಜಯಂತ ಕೆ, ಗಿರಿಜ, ಸುಂದರಿ, ಗೀತಾ ಕೆರೆಮೂಲೆ ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮಹೇಶ್ ಕೆ ಸವಣೂರು ವಂದಿಸಿದರು.













