ರಾಮಕೃಷ್ಣ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು : ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪುತ್ತೂರು ಇದರ 2026- 27ನೇ ಸಾಲಿನ ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ರಚನೆಯು ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಅಧ್ಯಕ್ಷತೆಯಲ್ಲಿ ಜರಗಿತು.

ಸಂಘದ ಅಧ್ಯಕ್ಷರಾಗಿ ಸೌಮ್ಯಶ್ರೀ, ಉಪಾಧ್ಯಕ್ಷರಾಗಿ ಪ್ರತ್ಯೂಷ್, ಕಾರ್ಯದರ್ಶಿಯಾಗಿ ಶಶಿಕಲಾ, ಜತೆ ಕಾರ್ಯದರ್ಶಿಯಾಗಿ ಸುಜಿತ್‌ ರೈ ಹಾಗೂ ಕೋಶಾಧಿಕಾರಿಯಾಗಿ ಪ್ರೇಮ ಜಿ.ಪಿ ರವರು ಆಯ್ಕೆಯಾದರು.

ಶಾಲಾ ಮುಖ್ಯ ಶಿಕ್ಷಕಿ ಗಾಯತ್ರಿಎಸ್, ನಿವೃತ್ತ ಶಿಕ್ಷಕರಾದ ಎನ್ ಮನೋಹರ ರೈ, ವಸಂತಿ. ಕೆ, ರೂಪಕಲಾ ಕೆ, ಮಾಲತಿ, ಹಾಗೂ ಜಯಲಕ್ಷ್ಮಿ ಎ, ಶಿಕ್ಷಕಿ ಸಂಧ್ಯಾ.ಕೆ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾಗರ್ ಉಪಸ್ಥಿತರಿದ್ದರು. ಉಷಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ಗ್ರೀಷ್ಮಾ ಸ್ವಾಗತಿಸಿ, ಶಶಿಕಲಾ ವಂದಿಸಿದರು.

LEAVE A REPLY

Please enter your comment!
Please enter your name here