







ಕಡಬ: ಕಡಬ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುನರ್ ರಚಿಸಲಾಗಿದ್ದು ಅಧ್ಯಕ್ಷರಾಗಿ ಕೃಷ್ಣಪ್ಪ ಜಿ.ರಾಮಕುಂಜ ನೇಮಕಗೊಂಡಿದ್ದಾರೆ.


ಜಿಲ್ಲಾ ಉಸ್ತುವಾರಿ ಸಚಿವರ ಕೋರಿಕೆಯಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುನರ್ ರಚನೆ ಮಾಡಲಾಗಿದೆ. ನೂತನ ಸಮಿತಿ ಸದಸ್ಯರಾಗಿ ಜಯರಾಮ ಗೌಡ ಕರ್ಲ್ಲಾಪೆ ಎಡಮಂಗಳ, ಸವಿತಾ ಕೌಕ್ರಾಡಿ, ಇಸ್ಮಾಯಿಲ್ ಕೋಲ್ಪೆ, ಪೂವಪ್ಪ ಕರ್ಕೇರ ಆಲಂತಾಯ, ದೇವಶ್ಯ ಶಿರಾಡಿ, ಸತೀಶ್ ಶೆಟ್ಟಿ ಬೈತಡ್ಕ, ರಂಜನ್ ಅಗರಿಕೆರೆ ಸುಬ್ರಹ್ಮಣ್ಯ, ಸಿದ್ದೀಕ್ ನೀರಾಜೆ, ಮೋಹಿನಿ ಕೋಡಿಬೈಲ್, ಸೃಜನ್ ಹೈನಕ್ಕಿಮನೆ, ಚಂದ್ರಶೇಖರ್ ಬಳಪ, ಗಣೇಶ್ ಕೈಕುರೆ, ವಿಜಯಕುಮಾರ್ ರೈ ಕರ್ಮಾಯಿ, ಮಹಮ್ಮದ್ ಕಲಂದರ್ ಸನ್ಯಾಸಿಮೂಲೆ ಕೊಯಿಲ ಹಾಗೂ ಕಡಬ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಆದೇಶಿಸಿದ್ದಾರೆ.



ಕಡಬ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೃಷ್ಣಪ್ಪ ಜಿ.ರಾಮಕುಂಜ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಕೃಷ್ಣಪ್ಪ ಜಿ.ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.










