







ಪುತ್ತೂರು: ಅ.7ರಂದು ಸಂಜೆ ಸುರಿದ ಭಾರೀ ಮಳೆಗೆ ಆನೆಮಜಲು ಕೋರ್ಟ್ ಸಂಪರ್ಕ ರಸ್ತೆಯ ಜಂಕ್ಷನ್‌ನಲ್ಲಿ ಹೆದ್ದಾರಿಗೆ ಮರದ ಗೆಲ್ಲು ಬಿದ್ದು ಕೆಲಹೊತ್ತು ಸಂಚಾರಕ್ಕೆ ತೊಂದರೆಯುಂಟಾದ ಘಟನೆ ನಡೆದಿದೆ.


ಕೋರ್ಟ್ ಸಂಪರ್ಕ ರಸ್ತೆಯ ಸಮೀಪದ ದೊಡ್ಡ ಮರವೊಂದರ ಗೆಲ್ಲು ಪುತ್ತೂರು ಉಪ್ಪಿನಂಗಡಿ ರಸ್ತೆಯ ಒಂದು ಭಾಗಕ್ಕೆ ಬಿದ್ದಿತ್ತು. ಇದರಿಂದ ಪುತ್ತೂರಿನಿಂದ ಉಪ್ಪಿನಂಗಡಿ ರಸ್ತೆಗೆ ಹೋಗುವ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ಬಳಿಕ ಗೆಲ್ಲು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.













