ಬಲ್ಪದಲ್ಲಿ ಮರಾಠಿ ಸಂರಕ್ಷಣಾ ಸಮಿತಿಯಿಂದ ಸ್ವಚ್ಛತಾ ಕಾರ್ಯಕ್ರಮ

0

ನಿಡ್ಪಳ್ಳಿ: ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿ ವತಿಯಿಂದ ಬಲ್ಪ ಗ್ರಾಮದ ಬಾಲಾಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ವೀರ ಯೋಧ ದಿವಂಗತ ರಾಮ ನಾಯ್ಕ ಏನೇಕಲ್ ಅವರ ಸ್ಮರಣಾರ್ಥ ಪ್ರಯಾಣಿಕರ ತಂಗುದಾಣದ ಸುತ್ತಮುತ್ತ ಸ್ವಚ್ಛತಾ ಕಾರ್ಯ ಹಾಗೂ ಪೈಂಟಿಂಗ್, ಚಿತ್ರ ಬಿಡಿಸುವ ಕಾರ್ಯ ನಡೆಯಿತು. ಈ ಮಾರ್ಗದಲ್ಲಿ ತೆರಳುತ್ತಿದ್ದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಕಾರ್ಯವನ್ನು ಶ್ಲಾಘಿಸಿ, ಸಂಘಟನೆ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಅಶೋಕ ನಾಯ್ಕ ಕೆದಿಲ, ಸ್ವಚ್ಛತಾ ಸಂಚಾಲಕರಾದ ತಿರುಮಲೇಶ್ವರ ಪೆರುವಾಯಿ, ಶೇಷಪ್ಪ ಅಡ್ಯನಡ್ಕ, ಸತೀಶ್ ಈಶ್ವರಮಂಗಲ, ಯಶವಂತ ಸುಳ್ಯ, ಆನಂದ ಪೆರುವಾಯಿ, ಬಾಲಕೃಷ್ಣ ಡಿ. ನಿಡ್ಪಳ್ಳಿ, ರತ್ನಾವತಿ ದಾರಂದಕುಕ್ಕು, ಪ್ರಸನ್ನ ಕೊಕ್ಕಡ, ಹರೀಶ್ ಮಂಕುಡೆ, ಭರತ್ ನಿಡ್ಪಳ್ಳಿ, ಯೋಗಿಶ್ ಆರ್ಲಪದವು, ಯತೀಶ್ ಆರ್ಲಪದವು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here