ಪಿಲಿಕುಳದಲ್ಲಿ ನಡೆದ ವಿಶ್ವ ಬಾಹ್ಯಾಕಾಶ ಸಪ್ತಾಹ: ಪುತ್ತೂರಿನ ವಿದ್ಯಾರ್ಥಿ ಅನುದೀಪ್ ರೈ ಡಿ. ತೃತೀಯ ಸ್ಥಾನ

0

ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಯು.ಆರ್.ರಾವ್ ಉಪಗ್ರಹ ಕೇಂದ್ರ ಬೆಂಗಳೂರು (ಇಸ್ರೋ) ಸಹಯೋಗದಲ್ಲಿ ಅ.7ರಂದು ಆಯೋಜಿಸಿದ್ದ “ವಿಶ್ವ ಬಾಹ್ಯಾಕಾಶ ಸಪ್ತಾಹ – 2026” ಕಾರ್ಯಕ್ರಮದಲ್ಲಿ ಪುತ್ತೂರಿನ ವಿದ್ಯಾರ್ಥಿ ಸಾಧನೆ ಮೆರೆದಿದ್ದಾನೆ.

ಸೆಟಲೈಟ್ ಮಾಡೆಲ್ ತಯಾರಿ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಇದರ 9ನೇ ತರಗತಿಯ ವಿದ್ಯಾರ್ಥಿ ಅನುದೀಪ್ ರೈ ಡಿ. ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ.

ಕರಾವಳಿ ಭಾಗದ ವಿವಿಧ ಶಾಲೆಗಳಿಂದ ಸುಮಾರು 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅನುದೀಪ್ ರೈ ಅವರು ದೇರ್ಲ ಶಿವಶ್ರೀರಂಜನ್ ರೈ ಮತ್ತು ಪ್ರತಿಭಾ ಎಸ್ ರೈ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here