ವಿದ್ಯುತ್ ಅವಘಡದಿಂದ ಮೃತಪಟ್ಟ ಪವರ್‌ಮ್ಯಾನ್ ರವಿಗೌಡ ಕುಟುಂಬಕ್ಕೆ ಗೌಡ ಸಂಘದಿಂದ ಸಾಂತ್ವನ, ಧನ ಸಹಾಯ

0

ಪುತ್ತೂರು: ಕರ್ತವ್ಯದ ವೇಳೆ ವಿದ್ಯುತ್ ಅವಘಡದಿಂದ ಮೃತಪಟ್ಟಿರುವ ಮೆಸ್ಕಾ ಪವರ್‌ಮ್ಯಾನ್ ಕೆಮ್ಮಾಯಿ ನಿವಾಸಿ ರವಿ ಗೌಡ ಅವರ ಮನೆಗೆ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ನಿಯೋಗ ಭೇಟಿ ನೀಡಿ ಮೃತರ ಮನೆಯವರಿಗೆ ಸಾಂತ್ವನ ಹೇಳಿ, ಸಹಾಯಧನದ ಚೆಕ್‌ನ್ನು ಹಸ್ತಾಂತರಿಸಿದರು.


ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು, ಪ್ರಧಾನ ಕಾರ್ಯದರ್ಶಿ ಡಾ.ಶ್ರೀಧರ ಗೌಡ ಪಾಣತ್ತಿಲ, ಉಪಾಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಖಜಾಂಚಿ ಶ್ರೀಧರ ಗೌಡ ಕಣಜಾಲು, ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಗೌಡ ಯುವ ಸಂಘದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಗೌರವಾಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಟ್ರಸ್ಟ್‌ ನ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ಸಿಸಿಪಿ ಸಂಯೋಜಕ ಪ್ರಸನ್ನ ಕುಮಾರ್ ಡಿ.ಆರ್, ಸುರೇಶ್ ಗೌಡ ಕಲ್ಲಾರೆ, ಲೋಕನಾಥ ಗೌಡ ಕಾಡಮನೆ, ಕಾರ್ತಿಕ್ ಹಾಗೂ ದಿವ್ಯೇಶ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here