ಡಾ.ರಾಜೇಶ್ ರೈ ಸವಣೂರು ಅವರಿಗೆ ಅಂಬಾ ಬ್ರದರ್ಸ್ ಸಂಸ್ಥೆಯಿಂದ ಸನ್ಮಾನ

0

ಪುತ್ತೂರು : ಇಂಗ್ಲೆಂಡ್ ನ ನಾಟಿಂಗ್ ಹ್ಯಾಮ್ ಶೈರ್ ನ ಕಿಂಗ್ಸ್ ಮಿಲ್ ಆಸ್ಪತ್ರೆಯಲ್ಲಿ ಕನ್ಸ್ ಲ್ಟೆಂಟ್ ಫಿಶಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ.ರಾಜೇಶ್ ರೈ ಸವಣೂರು ಅವರು ಪ್ರತಿಷ್ಠಿತ ಲಂಡನ್ ನ ರಾಯಲ್ ಕಾಲೇಜ್ ಆಫ್ ಫಿಶಿಷಿಯನ್ಸ್ ನ ಫೆಲೋ ಗೌರವಕ್ಕೆ ಪಾತ್ರರಾಗಿರುವ ಹಿನ್ನಲೆಯಲ್ಲಿ ಡಾ.ರಾಜೇಶ್ ರೈ ಅವರನ್ನು ಸವಣೂರು ಅಂಬಾ ಬ್ರದರ್ಸ್ ಸಂಸ್ಥೆಯ ವತಿಯಿಂದ ಅ. 8 ರಂದು ಸವಣೂರು ರಶ್ಮಿ ನಿವಾಸದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಸಹಕಾರರತ್ನ ಸವಣೂರು ಸೀತಾರಾಮ ರೈ, ಕಸ್ತೂರಿಕಲಾ ಎಸ್ ರೈ, ಅಶ್ವಿನ್ ಎಲ್ ಶೆಟ್ಟಿ, ರಶ್ಮಿ ಅಶ್ವಿನ್ ಶೆಟ್ಟಿ, ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಸವಣೂರು ಅಂಬಾ ಬ್ರದರ್ಸ್ ಸಂಸ್ಥೆಯ ಬಾಲಚಂದ್ರ ರೈ ಕೆರೆಕ್ಕೋಡಿ, ಜಯರಾಮ ರೈ ಮೂಡಂಬೈಲು, ರಾಜ್ ದೀಪಕ್ ಶೆಟ್ಟಿ ಮಠ, ಸಂದೇಶ್ ಬಲ್ಯಾಯ, ಕೀರ್ತನ್ ಕೋಡಿಬೈಲು, ಆದರ್ಶ್ ಜೆ.ರೈ,ಶಿಕ್ಷಿತ್ ನಾಯ್ಕ್, ಸುಶಾಂತ್ ನಾಯ್ಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here