







ಪುತ್ತೂರು: ಅಂಡರ್ವಾಟರ್ ಫಿನ್ಸ್ವಿಮ್ಮಿಂಗ್ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪುತ್ತೂರು ಅಕ್ವಾಟಿಕ್ ಕ್ಲಬ್ನ ಈಜುಗಾರರು 9 ಚಿನ್ನ, 5ಬೆಳ್ಳಿ ಹಾಗೂ 3 ಕಂಚಿನ ಪದಕ ಸೇರಿದಂತೆ ಒಟ್ಟು 12 ಪದಕಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.ಜೂನಿಯರ್ ವಿಭಾಗದ ಸಮೃದ್ಧ್ ಅವರು 4*100 ಮೀಟರ್ ಬಿ-ಫಿನ್ ರಿಲೇಯಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಜೂನಿಯರ್ ಸಿ ವಿಭಾಗದ ಲಿಖಿತ್ ಅವರು 50 ಮೀಟರ್ ಬಿ-ಫಿನ್ಸ್ ಹಾಗೂ 100 ಮೀಟರ್ ಬಿ-ಫಿನ್ಸ್ನಲ್ಲಿ ಬೆಳ್ಳಿ ಪದಕ, 200 ಮೀಟರ್ ಬಿ-ಫಿನ್ಸ್ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.


ಜೂನಿಯರ್ ಸಿ ವಿಭಾಗದ ನಾಮನ್ ಅವರು 4*100 ಮೀಟರ್ ಮಿಕ್ಸ್ಡ್ ಬಿ-ಫಿನ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಜೂನಿಯರ್ ಡಿ ವಿಭಾಗದ ಸಾನ್ವಿ ಸಿಹೆಚ್ ಅವರು 50 ಮೀಟರ್ ಅಪ್ನಿಯಾ, 50 ಮೀಟರ್ ಬಿ-ಫಿನ್ಸ್ ಹಾಗೂ 4*100 ಮೀಟರ್ ಮಿಕ್ಸ್ಡ್ ಬಿ-ಫಿನ್ ರಿಲೇಯಲ್ಲಿ ತಲಾ ಚಿನ್ನದ ಪದಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.ಜೂನಿಯರ್ ಸಿ ವಿಭಾಗದ ಲಾಸ್ಯಾ ಕಿಶನ್ ಅವರು 50 ಮೀಟರ್ ಬಿ-ಫಿನ್ಸ್ ಹಾಗೂ 100 ಮೀಟರ್ ಬಿ-ಫಿನ್ಸ್ನಲ್ಲಿ ಚಿನ್ನದ ಪದಕ ಗೆದ್ದು ಎರಡೂ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ೫೦ ಮೀಟರ್ ಅಪ್ನಿಯಾದಲ್ಲಿ ಕಂಚಿನ ಪದಕ ಹಾಗೂ 4*100 ಮೀಟರ್ ಮಿಕ್ಸ್ಡ್ ಬಿ-ಫಿನ್ ರಿಲೇಯಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.ಮಾಸ್ಟರ್ ವಿ1 ವಿಭಾಗದ ರಾಕೇಶ್ ಕುಮಾರ್ ಅವರು 200 ಮೀಟರ್ ಬಿ-ಫಿನ್ಸ್ನಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.50 ಮೀಟರ್ ಅಪ್ನಿಯಾದಲ್ಲಿ ಬೆಳ್ಳಿ ಪದಕವನ್ನೂ ಪಡೆದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













