







ಪುತ್ತೂರು: ಕೆದಂಬಾಡಿ ಶ್ರೀ ರಾಮ ಮಂದಿರ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿ 2026ರ ಅಕ್ಟೋಬರ್ 11 ರಿಂದ 19 ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ “ನವರಾತ್ರಿ ಉತ್ಸವ”ವು ವಿಜೃಂಭಣೆಯಿಂದ ಜರಗಲಿದೆ. ಪ್ರತಿಯೊಂದು ದಿನವೂ ರಾತ್ರಿ 7 ರಿಂದ 8.30 ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನೆ ,ರಾತ್ರಿ 9:00 ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ.


ಕಾರ್ಯಕ್ರಮಗಳ ವಿವರ:
ಅ.11 ರಂದು ರಾತ್ರಿ 7:00ಕ್ಕೆ ನವರಾತ್ರಿ ಉತ್ಸವ ಆರಂಭಗೊಳ್ಳಲಿದ್ದು, ಶಂಕರನಾರಾಯಣ ಉಪಾಧ್ಯಾಯ ಪಟ್ಲಮೂಲೆಯವರು ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಮುಂಡಾಲಗುತ್ತು ಸಂಜೀವಿ ವಿಠಲ ರೈ ಮಾಣಿಪ್ಪಾಡಿ ಅವರ ಭಜನಾ ಸೇವೆ ಹಾಗೂ ಶ್ರೀ ರಾಮ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ರಾತ್ರಿ 8:30 ರಿಂದ ’ಶ್ರೀ ಕೃಷ್ಣ ಕಲಾಕೇಂದ್ರ ವೀರಮಂಗಲ ಅಭಿನಯಿಸುವ ನೃತ್ಯ ರೂಪಕ ‘ ಏಲ್ ಸತ್ಯೊಳು’ (ಸಪ್ತ ಮಾತ್ರಿಕೆಯರು) ಪ್ರದರ್ಶನಗೊಳ್ಳಲಿದೆ. ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸಿದೆ. ಅ.12 ಪಟ್ಟೆತ್ತಡ್ಕ ದೀಪಕ್ ನಾಯ್ಕ ಅವರ ಭಜನಾ ಸೇವೆ ಹಾಗೂ ಶ್ರೀ ಕೃಷ್ಣ ಭಜನಾ ಮಂಡಳಿ ಕೌಡಿಚ್ಚಾರ್ ಅವರಿಂದ ಭಜನೆ ಜರಗಲಿದೆ. ರಾತ್ರಿ 8:30 ರಿಂದ ವಿದುಷಿ ರಶ್ಮಿ ದಿಲೀಪ್ ರೈ ಮತ್ತು ಶಿಷ್ಯವೃಂದ ಬೃಂದಾವನ ನಾಟ್ಯಾಲಯ ಕುಂಬ್ರ ಇವರಿಂದ ’ಸಾಂಸ್ಕೃತಿಕ ವೈಭವ’ ಪ್ರದರ್ಶನಗೊಳ್ಳಲಿದೆ. ಅ.13 ರಂದು ಎಂ. ಕರುಣಾಕರ ರೈ ಅತ್ರೆಜಾಲು ಅವರ ಭಜನಾ ಸೇವೆ ಹಾಗೂ ಸದಾಶಿವ ಭಜನಾ ಮಂಡಳಿ ಸದಾಶಿವನಗರ ಇವರಿಂದ ಭಜನೆ ನಡೆಯಲಿದೆ. ರಾತ್ರಿ 8:30 ರಿಂದ ತುಳು ಅಪ್ಪೆ ಕೂಟ ಪುತ್ತೂರು ಇವರಿಂದ ಅನಂತಾರಾಮ ಬಂಗಾಡಿ ವಿರಚಿತ‘ ಮೇದಿನಿ ನಿರ್ಮಾಣ’ ಯಕ್ಷಗಾನ ತಾಳಮದ್ದಳೆ ಜರಗಲಿದೆ.



ಅ.14 ರಂದು ಬೆದ್ರುಮಾರು ಅರುಣಶಂಕರ ರೈ ಮುಂಬೈ ಅವರ ಭಜನಾ ಸೇವೆ ಹಾಗೂ ಶ್ರೀ ರಾಮ ಭಜನಾ ಮಂಡಳಿ ಕುಂಬ್ರ ಇವರಿಂದ ಭಜನೆ ನೆರವೇರಲಿದೆ. ರಾತ್ರಿ 8:30 ರಿಂದ ಶ್ರೀ ಶಾರದಾ ಕಲಾ ಶಾಲೆ ಕುಂಬ್ರ ಶಾಖೆಯ ವಿದುಷಿ ದೀಪ್ತಿ ರವಿಚಂದ್ರ ಮತ್ತು ಶಿಷ್ಯವೃಂದದಿಂದ ’ನೃತ್ಯ ಸಮೂಹ’ ಕಾರ್ಯಕ್ರಮ ನಡೆಯಲಿದೆ. ಅ.15 ರಂದು ಪದ್ಮಾವತಿ ವಿಶ್ವನಾಥ ರೈ ಕೋರಂಗ ಅವರ ಭಜನಾ ಸೇವೆ ಹಾಗೂ ಶ್ರೀ ತುಡರ್ ಭಜನಾ ಸಂಘ ಕಾವು ಇವರಿಂದ ಭಜನೆ ನೆರವೇರಲಿದೆ. ರಾತ್ರಿ 8:30 ರಿಂದ ವಿದುಷಿ ಸಂಧ್ಯಾ ಗಣೇಶ್ ಭಟ್ ವಿಟ್ಲ ಅವರ ಮುಂಡೂರು ಶಾಖೆಯ ಶಿಷ್ಯವೃಂದದಿಂದ ’ನೃತ್ಯ ವೈವಿಧ್ಯ’ ಜರಗಲಿದೆ.ನ.16 ರಂದು ಓಲೆಮುಂಡೋವು ಭಾಸ್ಕರ ರೈ ಕಳ್ಳಿಮಾರು ಅವರ ಭಜನಾ ಸೇವೆ ಹಾಗೂ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಉದಯಗಿರಿ ಮುಂಡೂರು ಅವರಿಂದ ಭಜನೆ ನೆರವೇರಲಿದೆ. ರಾತ್ರಿ 8:30 ರಿಂದ ಜೈದೀಪ್ ಕೋರಂಗ ಅವರ ಸಾರಥ್ಯದಲ್ಲಿ ’ಸಾಂಸ್ಕೃತಿಕ ವೈಭವ – ಕುಸಲ್ದ ಎಸಲ್’ ಕಾರ್ಯಕ್ರಮ ನಡೆಯಲಿದೆ.ಅ.17 ನಾಲ ಕೃಷ್ಣ ರೈ, ಮುಂಡಾಲಗುತ್ತು ಅವರ ಭಜನಾ ಸೇವೆ ಹಾಗೂ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಬಿಳಿನೆಲೆ ಕಡಬ ಇವರಿಂದ ಭಜನೆ ಜರಗಲಿದೆ. ರಾತ್ರಿ 8:30 ರಿಂದ ಕು| ಅಭೀಜ್ಞಾ ಮತ್ತು ಶಿಷ್ಯವೃಂದ ನಾಟ್ಯಾಭಿಯೋಗಿ ನೃತ್ಯಶಾಲೆ ತಿಂಗಳಾಡಿ ಇವರಿಂದ ’ನೃತ್ಯಾರ್ಪಣಂ’ ನಡೆಯಲಿದೆ. ಅ.18 ರಂದು ಸಂಜೆ 6:30 ರಿಂದ ’ಶ್ರೀ ದುರ್ಗಾನಮಸ್ಕಾರ ಪೂಜೆ’ ಹಾಗೂ ರಾತ್ರಿ 8:30 ರಿಂದ ’ಸಾಮೂಹಿಕ ಆಯುಧ ಪೂಜೆ’ ಜರಗಲಿದೆ. ಭಜನಾ ಸೇವೆಯನ್ನು ಉಷಾ ಗಂಗಾಧರ ರೈ ಕೆರೆಮೂಲೆ ನೆರವೇರಿಸಲಿದ್ದು, ಶ್ರೀರಾಮ ಭಜನಾ ಮಂಡಳಿ ಕೆದಂಬಾಡಿ ಇವರಿಂದ ಭಜನೆ ಜರಗಲಿದೆ.

ಅ.19 ರಂದು ಕಡಮಜಲು ಸುಭಾಸ್ ರೈ ಅವರ ಭಜನಾ ಸೇವೆ ಹಾಗೂ ಶ್ರೀ ದೇವತಾ ಭಜನಾ ಮಂಡಳಿ ದೇವಗಿರಿ ತಿಂಗಳಾಡಿ ಅವರಿಂದ ಭಜನೆ ನಡೆಯಲಿದೆ. ರಾತ್ರಿ 8:30 ರಿಂದ ’ನವರಾತ್ರಿ ಉತ್ಸವದ ಸಮಾರೋಪ’ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರಾಘವ ಗೌಡ ಕೆರೆಮೂಲೆ ಸಭಾಧ್ಯಕ್ಷತೆ ವಹಿಸಲಿದ್ದು ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ವಿದ್ಯಾ ಲಿಂಗಪ್ಪ, ಕೆಯ್ಯೂರು ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀರಾಮ ಮಂದಿರದ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಮಾಯಿಲು ಮುದರ ಕೋರಂಗ, ಗಿರಿಜ ಮಾಂಕು ಕೋರಂಗ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಯುವರಂಗದ ಸದಸ್ಯರಿಂದ ಮತ್ತು ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಡಳಿತ ಸಮಿತಿ, ಭಜನಾ ಸಮಿತಿ ಸರ್ವಸದಸ್ಯರು ಹಾಗೂ 129 ಮನೆ ಭಜನಾ ಸೇವಾಧಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಅ.11 ರಂದು ಏಳ್ ಸತ್ಯೋಳು ತುಳು ನೃತ್ಯ ರೂಪಕ, 12 ರಂದು ಸಾಂಸ್ಕೃತಿಕ ವೈಭವ, 13 ರಂದು ಮೇಧಿನಿ ನಿರ್ಮಾಣ ಯಕ್ಷಗಾನ ತಾಳಮದ್ದಳೆ, 14 ರಂದು ನೃತ್ಯ ಸಮೂಹ, 15 ರಂದು ನೃತ್ಯ ವೈವಿಧ್ಯ, 16 ರಂದು ಕುಸಲ್ದ ಎಸಲ್ ಸಾಂಸ್ಕೃತಿಕ ವೈಭವ, 17 ರಂದು ನೃತ್ಯಾರ್ಪಣಂ, 19 ರಂದು ಸಮಾರೋಪ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ.
ಅ.18 ರಂದು ಸಂಜೆ 6.30 ರಿಂದ ಶ್ರೀ ದುರ್ಗಾನಮಸ್ಕಾರ ಪೂಜೆ, 8.30 ರಿಂದ ಸಾಮೂಹಿಕ ಆಯುಧ ಪೂಜೆ ಜರಗಲಿದೆ.










