







ವಿಟ್ಲ: ರಜತ ಮಹೀತ್ಸವದ ಸಂಭ್ರಮದಲ್ಲಿರುವ ಒಡಿಯೂರು ಶ್ರೀ ಗುರುದೇವ ವಿದ್ಯಾ ಪೀಠದ ವತಿಯಿಂದ ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನವು ಅ.11ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಚೆಂಬರ್ಪುರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.


ಬೆಳಿಗ್ಗೆ 9.30 ಕ್ಕೆ ಶೋಭಾಯಾತ್ರೆಯನ್ನು ಸ್ವಾದ್ವಿ ಶ್ರೀ ಮಾತಾನಂದಮಯಿರವರು ಉದ್ಘಾಟಿಸಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿರವರು ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. ಸಾಧ್ವಿ ಶ್ರೀ ಮಾತಾನಂದಮಯಿರವರು ದಿವ್ಯ ಉಪಸ್ಥಿತರಿರಲಿದ್ದಾರೆ. ಸಮ್ಮೆಳನಾಧ್ಯಕ್ಷರಾದ ಸಾನ್ವಿ ಚೆಂಬರ್ಪು, ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಕಾನತಡ್ಕ ಉಪಸ್ಥಿತರಿರಲಿದ್ದಾರೆ.



ಬಳಿಕ ಕವಿಗೋಷ್ಠಿ, ಸಂವಾದ, ಗಾನ-ನೃತ್ಯ-ಚಿತ್ರ, ಕಥಾ ಗೋಷ್ಠಿ, ಗಮಕವಾಚನ – ವ್ಯಾಖ್ಯಾನ ನಡೆಯಲಿದ್ದು, ಸಾಯಂಕಾಲ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.










