ಪಾಣಾಜೆ; ಪುತ್ತಿಲ ಪರಿವಾರ ವತಿಯಿಂದ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಧನ ವಿತರಣೆ

0

ನಿಡ್ಪಳ್ಳಿ;ಪಾಣಾಜೆ ಗ್ರಾಮದ ಕಲ್ಲಪದವು ನಿವಾಸಿ‌ ಹೇಮಾವತಿ ಎಂಬವರು ವರ್ಷಗಳ ಹಿಂದೆ ಮನೆಯ ಮಹಡಿಯಿಂದ  ಬಿದ್ದು ವಿಪರೀತವಾಗಿ ಗಾಯಗೊಂಡಿದ್ದರು.

ಚಿಕಿತ್ಸೆ ನೀಡಿದರೂ ತನ್ನ ಎರಡೂ ಕಾಲುಗಳು ನಿಷ್ಕ್ರಿಯಗೊಂಡಿದ್ದು  ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿದ್ದಾರೆ. ಇವರ ಮುಂದಿನ ವೈದ್ಯಕೀಯ ಚಿಕಿತ್ಸೆಗಾಗಿ ಅವರ ಮನೆಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಅ.8 ರಂದು ಭೇಟಿ ನೀಡಿ  ಸೇವಾ ಟ್ರಸ್ಟ್ ನ ವತಿಯಿಂದ ಸಹಾಯಧನ ನೀಡಿದರು.

ಟ್ರಸ್ಟ್ ನ ಮಾರ್ಗದರ್ಶಕರಾದ ಹರಿಪ್ರಸಾದ್ ಕಾಸರಗೋಡು,  ಟ್ರಸ್ಟ್ ಪ್ರದಾನ ಕಾರ್ಯದರ್ಶಿ  ಹರೀಶ್ ಮರುವಾಳ, ಸಂಘಟನಾ ಕಾರ್ಯದರ್ಶಿ ಅನಿಲ್ ತೆಂಕಿಲ, ನಿರ್ದೇಶಕರಾದ ಅನಿಲ್ ಕಣ್ಣರ್ನೂಜಿ,ಪ್ರೇಮ್ ರಾಜ್ ಆರ್ಲಪದವು,ಪಾಣಾಜೆ ಗ್ರಾಮಪಂಚಾಯತ್ ಮಾಜಿ ಉಪಾಧ್ಯಕ್ಷರಾದ  ಜಯಶ್ರೀ ಪಾಣಾಜೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here