ಅಂತರ‍್ರಾಷ್ಟೀಯ ಕರಾಟೆ ಸ್ಪರ್ಧೆಯಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾರ್ಥಿಗಳ ಗಣನೀಯ ಸಾಧನೆ

0

ಟೀಮ್ ಕುಮಿಟೆಯಲ್ಲಿ ಮೊಹಮ್ಮದ್ ಹಿಶಾಮ್‌ಗೆ ಚಿನ್ನದ ಪದಕ, 52 ಕೆ.ಜಿ.ವಿಭಾಗದ ಕುಮಿಟೆಯಲ್ಲಿ ಫಾತಿಮತ್ ಫಸಿಲಾಗೆ ಬೆಳ್ಳಿ
ಮಹಮ್ಮದ್ ಸಾನಿ, ಆರಾಧ್ಯ, ಅದ್ವೈತ್, ವರ್ಣಿತ್, ಮನ್ವಿತ್‌ಗೆ ಕಂಚು


ನೆಲ್ಯಾಡಿ: ಮಹಾರಾಷ್ಟçದ ಪುಣೆಯಲ್ಲಿ ಅ.5ರಿಂದ 10ರ ತನಕ ನಡೆದ 8ನೇ ಡಬ್ಲ್ಯುಜಿ ಕೆಎಫ್ ವರ್ಲ್ಡ್ ಗೊಜೊರಿಯೊ ಚಾಂಪಿಯನ್ ಶಿಪ್ 2026 ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನೆಲ್ಯಾಡಿ ಜ್ಞಾನೋದಯ ಬೆಥನಿ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದಾರೆ. 8-9 ವಯಸ್ಸಿನ ಬಾಲಕರ ಟೀಮ್ ಕುಮಿಟೆ ವಿಭಾಗದಲ್ಲಿ ಸಂಸ್ಥೆಯ 4ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಹಿಶಾಮ್ ಕೆ.ಕೆ. ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈತ ಕೊಣಾಲು ಗ್ರಾಮದ ಕೋಲ್ಪೆ ನಿವಾಸಿ, ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್ ಕೆ.ಕೆ.ಹಾಗೂ ರಂಶೀನ ದಂಪತಿ ಪುತ್ರ.16-12 ವಯಸ್ಸಿನ 52 ಕೆ.ಜಿ. ಬಾಲಕಿಯರ ವಿಭಾಗದ ಕುಮಿಟೆ ಸ್ಪರ್ಧೆಯಲ್ಲಿ ಸಂಸ್ಥೆಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಫಾತಿಮತ್ ಫಸಿಲಾ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಈಕೆ ಕುಂತೂರು ನಿವಾಸಿ ಉಮ್ಮರ್ ಫಾರೂಕ್ ಹಾಗೂ ಶಕೀನಾ ಹೆಚ್.ದಂಪತಿ ಪುತ್ರಿ.


13-14 ವಯಸ್ಸಿನ 48 ಕೆ.ಜಿ.ಬಾಲಕರ ವಿಭಾಗದ ಕುಮಿಟೆಯಲ್ಲಿ 9ನೇ ತರಗತಿಯ ಮಹಮ್ಮದ್ ಸಾನಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈತ ಕುಂತೂರು ನಿವಾಸಿ ಉಮ್ಮರ್ ಫಾರೂಕ್ ಹಾಗೂ ಶಕೀನಾ ಹೆಚ್.ದಂಪತಿ ಪುತ್ರ.12-13 ವಯಸ್ಸಿನ ಮೈನಸ್ 38 ಕೆ.ಜಿ. ಬಾಲಕಿಯರ ವಿಭಾಗದ ಕುಮಿಟೆಯಲ್ಲಿ ೭ನೇ ತರಗತಿ ವಿದ್ಯಾರ್ಥಿನಿ ಆರಾಧ್ಯ ಕೆ.ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈಕೆ ಬಜತ್ತೂರು ಗ್ರಾಮದ ಕಾಂಚನ ರಾಜಾರಾಮ್ ಕೆ.ಹಾಗೂ ಗಾಯನ ಕೆ.ದಂಪತಿ ಪುತ್ರಿ. ೮-೯ ವಯಸ್ಸಿನ ಮೈನಸ್ 32 ಕೆ.ಜಿ.ಬಾಲಕರ ವಿಭಾಗದ ಕುಮಿಟೆಯಲ್ಲಿ ೩ನೇ ತರಗತಿಯ ಅದ್ತ್ವೈತ್ ಕೆ., ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈತ ಬಜತ್ತೂರು ಕಾಂಚನ ನಿವಾಸಿ ರಾಜಾರಾಮ್ ಕೆ.ಹಾಗೂ ಗಾಯನ ದಂಪತಿ ಪುತ್ರ. 10-11 ವಯಸ್ಸಿನ ಮೈನಸ್ ೩೨ ಕೆ.ಜಿ. ಬಾಲಕರ ವಿಭಾಗದ ಕುಮಿಟೆಯಲ್ಲಿ 5ನೇ ತರಗತಿಯ ವರ್ಣಿತ್ ಪಿ.ವಿ. ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈತ ಬಜತ್ತೂರು ಗ್ರಾಮದ ವಳಾಲು ಪಿಜಕ್ಕಳ ನಿವಾಸಿ ವಿಕಾಸ್ ಪಿ.ವಿ.ಹಾಗೂ ದೀಪಿಕಾ ಡಿ.ಎಂ.ದಂಪತಿ ಪುತ್ರ. 8-9 ವಯಸ್ಸಿನ ಮೈನಸ್ 27 ಕೆ.ಜಿ. ಬಾಲಕರ ವಿಭಾಗದ ಕುಮಿಟೆಯಲ್ಲಿ 5ನೇ ತರಗತಯ ಮನ್ವಿತ್‌ಕುಮಾರ್ ಯು.ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈತ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ನಿವಾಸಿ ರಾಜೇಶ್ ಹಾಗೂ ಶುಭಲಕ್ಷ್ಮಿ ದಂಪತಿ ಪುತ್ರ.


ಈ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಹಾಗೂ ಮುಂಬೈಯಲ್ಲಿ ನಡೆದ ರಾಷ್ಟçಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಪುಣೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಗೊಂಡಿದ್ದರು. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ಡಬ್ಲ್ಯುಜಿ‌ ಕೆಎಫ್ ವರ್ಲ್ಡ್ ಗೊಜೊರಿಯೊ ಚಾಂಪಿಯನ್ ಶಿಪ್ ಮಹಾರಾಷ್ಟçದ ಪುಣೆಯಲ್ಲಿ ನಡೆದಿದ್ದು ಮುಂದಿನ ವರ್ಷ ಇಟಲಿಯಲ್ಲಿ ನಡೆಯಲಿದೆ. ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ.ಡಾ| ವರ್ಗೀಸ್ ಕೈಪನಡ್ಕ ಒಐಸಿ ಅವರ ಮಾರ್ಗದರ್ಶನದಲ್ಲಿ ಶಿಕ್ಷಕಿ ಅಲ್ಫೋನ್ಸಾ ಮಥಾಯಿ ಅವರು ತರಬೇತಿ ನೀಡಿದ್ದರು.


ಕೋಚ್‌ಗೂ ಚಿನ್ನದ ಪದಕ
ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಕರಾಟೆ ಶಿಕ್ಷಕಿ ಅಲ್ಫೋನ್ಸಾ ಮಥಾಯಿ ಅವರಿಗೂ ಈ ಕರಾಟೆ ಚಾಂಪಿಯನ್ ಶಿಫ್‌ನಲ್ಲಿ ಚಿನ್ನದ ಪದಕ ಲಭಿಸಿದೆ. 55 ವರ್ಷ ವಯಸ್ಸಿನ ಮಹಿಳೆಯರ ವಿಭಾಗದ ಕುಮಿಟೆಯಲ್ಲಿ ಅಲ್ಫೋನ್ಸಾ ಮಥಾಯಿ ಅವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇವರು ಅಂತಾರಾಷ್ಟ್ರೀಯ ಮಟ್ಟದ ಕರಾಟೆ ತರಬೇತುದಾರರಾಗಿದ್ದಾರೆ.

LEAVE A REPLY

Please enter your comment!
Please enter your name here