ʼಹೊಸ ಅಂಗಣʼ ಮಾಸ ಪತ್ರಿಕೆಯ ದಶಮಾನೋತ್ಸವ ಸಂಭ್ರಮದಲ್ಲಿ ಮಲ್ಲಿಕಾ ಜೆ. ರೈ ಅವರಿಗೆ ಗೌರವ ಸನ್ಮಾನ

0

ಪುತ್ತೂರು: ಮೂಲ್ಕಿ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರುಗಿದ ಹೊಸ ಅಂಗಣ ಮಾಸ ಪತ್ರಿಕೆಯ ದಶಮಾನೋತ್ಸವ ಸಂಭ್ರಮದಲ್ಲಿ ಪತ್ರಿಕೆಯ ಗೌರವ ಸಲಹೆಗಾರರಾಗಿರುವ ಪುತ್ತೂರಿನ ಕವಯಿತ್ರಿ, ಲೇಖಕಿ ಮಲ್ಲಿಕಾ ಜೆ. ರೈ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕರಾದ ಹರಿಶ್ಚಂದ್ರ ಪಿ. ಸಾಲಿಯಾನ್, ಗೌರವ ಸಂಪಾದಕರಾದ ಡಾ. ಹರಿಕೃಷ್ಣ ಪುನರೂರು ಹಾಗೂ ಮುಖ್ಯ ಅತಿಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here