ಯುವ ಕವಯತ್ರಿ ಸಂಪ್ರೀತಳಿಗೆ ಸನ್ಮಾನ

0

ಉಪ್ಪಿನಂಗಡಿ: ಯುವ ಕವಯತ್ರಿ ಸಂಪ್ರೀತ ಎಸ್. ಶೆಟ್ಟಿಗಾರ್ ಅವರನ್ನು ಅವರ ಮಾವ ಸಂಜೀವ ಬಿ. ಅವರ ಕೆಮ್ಮಾರದ ಬಡ್ಡಮೆಯ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಸವಣೂರಿನ ವಿದ್ಯಾರಶ್ಮಿ ಪ್ರಥಮ ಕಾಲೇಜಿನ ಬಿ.ಸಿ.ಎ. ವಿದ್ಯಾರ್ಥಿನಿಯಾಗಿರುವ ಈಕೆಯ ಚೊಚ್ಚಲ ಕೃತಿ ‘ಅಂತರಾಳದ ಧ್ವನಿ’ ಕವನ ಸಂಕಲನವು ಇತ್ತೀಚೆಗೆ ಬಿಡುಗಡೆಗೊಂಡಿತ್ತು. ಶಿಬಾಜೆ ಪೆರ್ಲ ಸಂಜೀವ ಶೆಟ್ಟಿಗಾರ್ ಮತ್ತು ಗೀತಾ ದಂಪತಿಯ ಪುತ್ರಿಯಾದ ಈಕೆ ವಿದ್ಯಾರ್ಜನೆಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದಾಳೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕು. ಸಂಪ್ರೀತ, ಸವಣೂರು ವಿದ್ಯಾರಶ್ಮಿ ಕಾಲೇಜಿನ ಪ್ರಾಂಶುಪಾಲರನ್ನು, ಬಾಲಕೃಷ್ಣ ಬೇರಿಕೆ, ಗಣೇಶ ಕೊಕ್ಕಡ ಹಾಗೂ ಪ್ರೋತ್ಸಾಹ ನೀಡಿದ ಎಲ್ಲರನ್ನು ಸ್ಮರಿಸಿದಳು.
ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಮತಿ ವಾರಿಜಾಕ್ಷಿ ಸಂಜೀವ ಬಿ., ಶಶಿಕಲಾ ನಾರಾಯಣ, ಪ್ರಜ್ಞಾ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here