







ಅಷ್ಟಬಂಧ ಬ್ರಹ್ಮಕಲಶೋತ್ಸವದ ʻಶಿವಸೇತುʼ ಅಭಿಯಾನಕ್ಕೆ ಚಾಲನೆ


ಬೆಟ್ಟಂಪಾಡಿ: ಮೊದಲ ಹಾಗೂ ಕೊನೆಯ ಜಾತ್ರೋತ್ಸವ ನಡೆಯುವ ಕ್ಷೇತ್ರವೆಂದೇ ಹೆಸರುವಾಸಿಯಾಗಿರುವ ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವವು ನ. 23 ರಿಂದ 26 ರವರೆಗೆ ನಡೆಯಲಿದ್ದು, ಆ ಪ್ರಯುಕ್ತ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಹಾಗೂ ಭಗವದ್ಭಕ್ತರ ಸಮಾಲೋಚನಾ ಸಭೆ ಅ. 11 ರಂದು ಶ್ರೀ ಕ್ಷೇತ್ರದಲ್ಲಿ ಜರಗಿತು.
ಶ್ರೀ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆರ್ಥಿಕ ಸಮಿತಿಯ ಸಂಚಾಲಕ, ಉದ್ಯಮಿ ಅರುಣ್ ಕುಮಾರ್ ರೈ ಆನಾಜೆ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.ದೇವಳದ ಪ್ರಧಾನ ಅರ್ಚಕ ವೇ.ಮೂ. ವೆಂಕಟ್ರಮಣ ಭಟ್ ಕಾನುಮೂಲೆ ಯವರು ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿ ಆಮಂತ್ರಣ ಪತ್ರವನ್ನು ಅರುಣ್ ಕುಮಾರ್ ರೈಯವರಿಗೆ ಹಸ್ತಾಂತರಿಸಿದರು. ಈ ವೇಳೆ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಕ್ಷೇತ್ರದ ಅಭಿವೃದ್ಧಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಪ್ರಧಾನ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ, ಆರ್ಥಿಕ ಸಮಿತಿ ಸಂಚಾಲಕರಾದ ಯತೀಶ್ ರೈ ಚೆಲ್ಯಡ್ಕ, ಡಾ. ಪ್ರೀತಿರಾಜ್ ಬಲ್ಲಾಳ್ ಸಂದರ್ಭೋಚಿತವಾಗಿ ಮಾತನಾಡಿ ಆರ್ಥಿಕ ಸಮಿತಿಗೆ ಎಲ್ಲರ ಸಹಕಾರವನ್ನು ಕೋರಿದರು. ಆಡಳಿತ ಸಮಿತಿ ಸದಸ್ಯರಾದ ಅರುಣ್ ಪ್ರಕಾಶ್ ರೈ ಮದಕ, ಸೀತರಾಮ ಗೌಡ ಮಿತ್ತಡ್ಕ, ನಾರಾಯಣ ಮನೋಳಿತ್ತಾಯ ಕಾಜಿಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಸಮಿತಿಗಳು ಸಂಚಾಲಕರು, ಸದಸ್ಯರು ಸಭೆಯಲ್ಲಿ ಪಾಲ್ಗೊಂಡರು.




ಯತೀಶ್ ರೈ ಚೆಲ್ಯಡ್ಕರವರಿಂದ 2 ಲಕ್ಷ ರೂ. ವಾಗ್ದಾನ
ಇದೇ ವೇಳೆ ಆರ್ಥಿಕ ಸಮಿತಿ ಸಂಚಾಲಕರೂ ಆಗಿರುವ, ಬೈಕಂಪಾಡಿಯ ಶ್ರೀ ಗಣೇಶ್ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಹಾಗೂ ಪ್ರಕೃತಿ ಇಎಫ್ಪಿ ಎಲ್ಎಲ್ಪಿಯ ಮ್ಹಾಲಕ, ಉದ್ಯಮಿ ಯತೀಶ್ ರೈ ಚೆಲ್ಯಡ್ಕ ರವರು ಕ್ಷೇತ್ರದ ಅಭಿವೃದ್ಧಿ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ರೂ.2 ಲಕ್ಷ ದೇಣಿಗೆ ವಾಗ್ದಾನ ಮಾಡಿದರು.
ಯಕ್ಷಗಾನ ಬಯಲಾಟ ಸೇವಾ ಸಮಿತಿಯಿಂದ ದೇಣಿಗೆ
ಕ್ಷೇತ್ರದ ಅಭಿವೃದ್ಧಿ ಹಾಗೂ ಬ್ರಹ್ಮಕಲಶೋತ್ಸವಕ್ಕಾಗಿ ಯಕ್ಷಗಾನ ಬಯಲಾಟ ಸೇವಾ ಸಮಿತಿ ವತಿಯಿಂದ ರೂ. 1,15,555 ಮೊತ್ತದ ಚೆಕ್ನ್ನು ಅಭಿವೃದ್ಧಿ ಸಮಿತಿಗೆ ಹಸ್ತಾಂತರಿಸಲಾಯಿತು. ಸಮಿತಿಯ ಅಧ್ಯಕ್ಷ ಡಾ. ಶ್ರೀಕೃಷ್ಣ ಭಟ್, ಸ್ಥಾಪಕ ಕೋಶಾಧಿಕಾರಿ ಮೋನಪ್ಪ ಗೌಡ ಮಿತ್ತಡ್ಕ, ಕಾರ್ಯದರ್ಶಿ ಅರುಣ್ ಪ್ರಕಾಶ್ ರೈ ಮದಕ, ಕೋಶಾಧಿಕಾರಿ ಉಮೇಶ್ ಮಿತ್ತಡ್ಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಲಲಿತ ಸಹಸ್ರನಾಮ ಹವನ
ಶರನ್ನವರಾತ್ರಿಯ ಅಂಗವಾಗಿ ಬೆಳಿಗ್ಗೆ ಕ್ಷೇತ್ರದ ಪ್ರಧಾನ ಅರ್ಚಕ ವೇ.ಮೂ. ವೆಂಕಟ್ರಮಣ ಭಟ್ ರವರ ನೇತೃತ್ವದಲ್ಲಿ ಶ್ರೀ ಲಲಿತ ಸಹಸ್ರ ನಾಮ ಹವನ ನೆರವೇರಿತು.

ಅಭಿವೃದ್ಧಿ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ ಸ್ವಾಗತಿಸಿ, ಪ್ರಸ್ತಾವನೆಗೈದರು. ಜತೆ ಕಾರ್ಯದರ್ಶಿ ಶಿವಪ್ರಸಾದ್ ತಲೆಪ್ಪಾಡಿ ವಂದಿಸಿದರು.
ಉದ್ಯಮಿ ಅರುಣ್ ಕುಮಾರ್ ರೈ ರವರಿಂದ ಆಮಂತ್ರಣ ಬಿಡುಗಡೆ
ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರವನ್ನು ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆರ್ಥಿಕ ಸಮಿತಿ ಸಂಚಾಲಕರೂ, ಪುತ್ತೂರಿನ ಮಣಿಕಂಠ ಎಚ್ಪಿ ಗ್ಯಾಸ್ ಏಜೆನ್ಸಿ ಮಾಲಕ, ಉದ್ಯಮಿ ಅರುಣ್ ಕುಮಾರ್ ರೈ ಆನಾಜೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ʻಶಿವಸೇತುʼ ಅಭಿಯಾನ
ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವವು 2027 ರ ಫೆಬ್ರವರಿ 19ರಿಂದ 24 ರವರೆಗೆ ಜರಗಲಿದ್ದು, ಇದರ ಅಂಗವಾಗಿ ಮನೆ ಮನೆಗೆ ಜಾತ್ರೋತ್ಸವದ ಆಮಂತ್ರಣ ಪತ್ರ ಮತ್ತು ಬ್ರಹ್ಮಕಲಶೋತ್ಸವದ ಮನವಿ ಪತ್ರ ತಲುಪಿಸಲು ವಿಶೇಷ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲಾಗಿದೆ. ಗ್ರಾಮದ ಸುಮಾರು 800 ಕ್ಕಿಂತ ಅಧಿಕ ಮನೆಗಳನ್ನು ಸಂಪರ್ಕಿಸಲು ಸುಮಾರು 67 ತಂಡದಲ್ಲಿ131 ʻಶಿವ ಸೈನಿಕʼ ರನ್ನು ಆಯ್ಕೆ ಮಾಡಿ ಅವರು ನಿಗದಿತ ಮನೆಗಳಿಗೆ ಸಂಪರ್ಕ ಮಾಡುವ ವಿಶಿಷ್ಟ ಯೋಜನೆ ಇದಾಗಿದ್ದು, ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಶಿವ ಸೈನಿಕರಿಗೆ ಆಮಂತ್ರಣ ಪತ್ರ ಹಾಗೂ ಮನವಿ ಪತ್ರ ಹಸ್ತಾಂತರಿಸಲಾಯಿತು. ಈ ಯೋಜನೆ ದೇವಸ್ಥಾನದ ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೂ ಅನ್ವಯವಾಗಲಿದೆ.










