







ಪುತ್ತೂರು: ಬಂಟರ ಸಂಘ ಪುತ್ತೂರು ತಾಲೂಕು ಇದರ ಯುವ ಘಟಕ ಮತ್ತು ವಿದ್ಯಾರ್ಥಿ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ಬಂಟರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಹಾಗೂ ಪುತ್ತೂರು ಬಂಟರ ಸಂಘದ ಯುವ ಬಂಟರ ವಿಭಾಗದ ಅಧ್ಯಕ್ಷ ಭಾಗ್ಯೇಶ್ ರೈಯವರ ಉಪಸ್ಥಿತಿಯಲ್ಲಿ ಆಯ್ಕೆ ಮಾಡಲಾಗಿದೆ.


ಪದಾಧಿಕಾರಿಗಳ ವಿವರ: ಈ ಕೆಳಗಿನಂತಿದೆ:
ಸಂದೇಶ್ ರೈ ಡಿ – ಪ್ರಧಾನ ಕಾರ್ಯದರ್ಶಿ, ಸುಚಿತ್ರಾ ಜೆ ರೈ – ಕೋಶಾಧಿಕಾರಿ, ಸಮೃದ್ದ್ ಡಿ ಶೆಟ್ಟಿ – ಅಧ್ಯಕ್ಷರು, ವಿದ್ಯಾರ್ಥಿ ಯುವ ಬಂಟರ ವಿಭಾಗ, ಸುಪ್ರೀತಾ ಎ ರೈ – ಜೊತೆ ಕಾರ್ಯದರ್ಶಿ, ಸುಜೀರ್ ಕುಮಾರ್ ಶೆಟ್ಟಿ – ಉಪಾಧ್ಯಕ್ಷರು (ಆಡಳಿತ), ದೇವಿ ಕಿರಣ್ ರೈ ಮಾದೋಡಿ – ಉಪಾಧ್ಯಕ್ಷರು (ಸಮುದಾಯ ಅಭಿವೃದ್ಧಿ), ಕಾರ್ತಿಕ್ ರೈ ಬೆಳಿಯೂರು ಕಟ್ಟೆ – ಉಪಾಧ್ಯಕ್ಷರು (ಕ್ರೀಡೆ), ಯಶುಭ ರೈ – ಉಪಾಧ್ಯಕ್ಷರು (ಸಾಂಸ್ಕೃತಿಕ), ರಶ್ಮಿ ಡಿ ರೈ – ಉಪಾಧ್ಯಕ್ಷರು (ಕಾರ್ಯಕ್ರಮ ಸಂಯೋಜನೆ), ಶ್ರವಣ್ ರೈ ಸಾರ್ಯ – ಉಪಾಧ್ಯಕ್ಷರು (ಧಾರ್ಮಿಕ), ರವಿಚಂದ್ರ ರೈ ಕುಂಬ್ರ ಉಪಾಧ್ಯಕ್ಷರು (ಕಛೇರಿ ನಿರ್ವಹಣೆ), ರಮ್ಯ ಶೆಟ್ಟಿ ನಂಜೆ – ಸಂಚಾಲಕರು (ಧಾರ್ಮಿಕ), ಶ್ರಾವ್ಯ ಶೆಟ್ಟಿ – ಸಂಚಾಲಕರು (ಕ್ರೀಡೆ), ವಿಜಯಲಕ್ಷ್ಮಿ ರೈ – ಸಂಚಾಲಕರು (ಸಾಂಸ್ಕೃತಿಕ), ಅಶ್ವಿನಿ ರೈ ನಂಜೆ – ಸಂಘಟನಾ ಕಾರ್ಯದರ್ಶಿ, ನೀತಾ ರೈ ಬೆಟ್ಟಂಪಾಡಿ – ಸಂಘಟನಾ ಕಾರ್ಯದರ್ಶಿ ಹಾಗೂ ಪೂರ್ವಿಕಾ ರೈ (ವಿದ್ಯಾರ್ಥಿ ವಿಭಾಗ)ರವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟನೆ ತಿಳಿಸಿದೆ.



ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಯುವ ಬಂಟರ ವಿಭಾಗಕ್ಕೆ ಭಾಗ್ಯೇಶ್ ರೈ ರವರ ನಾಯಕತ್ವದಲ್ಲಿ ಪೂರ್ಣ ಪ್ರಮಾಣದ ಪದಾಽಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಭಾಗ್ಯೇಶ್ ರೈ ಅವರು ಶೈಕ್ಷಣೀಕ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಿರುವ ಯುವ ಪ್ರತಿಭೆಯಾಗಿದ್ದು, ಇವರ ಮುಂದಾಳತ್ವದಲ್ಲಿ ಯುವ ಬಂಟರ ಸಂಘ ಅನೇಕ ಸಮಾಜಮುಖಿ ಕಾರ್ಯಕ್ರಮದೊಂದಿಗೆ ಪುತ್ತೂರು ತಾಲೂಕು ಯುವ ಬಂಟರನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡಲಿದೆ.ಜೊತೆಗೆ ತಾಲೂಕು ವಿದ್ಯಾರ್ಥಿ ಬಂಟರ ವಿಭಾಗದ ಅಧ್ಯಕ್ಷರಾಗಿ ಸಮೃದ್ದ್ ಡಿ ಶೆಟ್ಟಿ ಮತ್ತು ಅವರ ತಂಡ ವಿದ್ಯಾರ್ಥಿ ಬಂಟರನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡಲಿದೆ.
ಕಾವು ಹೇಮನಾಥ ಶೆಟ್ಟಿ
ಅಧ್ಯಕ್ಷರು- ಬಂಟರ ಸಂಘ ಪುತ್ತೂರು
ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪುತ್ತೂರು ತಾಲೂಕು ಯುವ ಬಂಟರ ವಿಭಾಗವು ಅತ್ಯುತ್ತಮವಾದ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಲಿದೆ. ತಾಲೂಕಿನಾದ್ಯಂತ ಇರುವ ಎಲ್ಲ ಯುವ ಬಂಟರನ್ನು ಒಂದೇ ವೇದಿಕೆಯಡಿ ಸೇರಿಸಿ, ಬಂಟ ಸಮಾಜ ಬಂಧುಗಳ ಸಹಕಾರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಬಂಟರ ಯಾನೆ ನಾಡವರ ಮಾತೃ ಸಂಘ, ತಾಲೂಕು ಮಹಿಳಾ ಬಂಟರ ವಿಭಾಗ ಮತ್ತು ವಿದ್ಯಾರ್ಥಿ ಬಂಟರ ವಿಭಾಗದವರ ಜೊತೆಗೆ ಬಂಟ ಸಮಾಜ ಬಾಂಧವರ ಪೂರ್ಣ ಸಹಕಾರ ಬೇಕು.
ಭಾಗ್ಯೇಶ್ ರೈ
ಅಧ್ಯಕ್ಷರು- ಯುವ ಬಂಟರ ವಿಭಾಗ ಪುತ್ತೂರು










