







ಪುತ್ತೂರು: ಪಾಣಾಜೆ ಕೋಟೆ ತರವಾಡು ಮನೆಯಲ್ಲಿ ಚಂಡಿಕಾಯಾಗ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಚಂಡಿಕಾ ಹೋಮ, ಭೂ ವರಾಹ ಹೋಮ, ಶಿವ ಪಾರ್ವತಿ ಪೂಜೆ, ಸುದರ್ಶನ ಹೋಮ, ಭಾಗವತ ಪಾರಾಯಣ, ಪವಮಾನ ಹೋಮ ಹಾಗೂ ಮೋಕ್ಷ ನಾರಾಯಣ ಬಲಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ತರವಾಡು ಮನೆಯ ಹಾಗೂ ಕುಟುಂಬದ ಸದಸ್ಯರು, ಹಿರಿಯರು ಮತ್ತು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡರು.
ತರವಾಡು ಮನೆಯ ಯಜಮಾನರಾದ ಗಣೇಶ್ ರೈ ನಾಡಾಜೆ, ಕುಟುಂಬಸ್ಥರಾದ ಜಯರಾಮ ರೈ ಮೂಡಂಬೈಲು, ಕೋಟೆ ಪುಷ್ಪರಾಜ ಶೆಟ್ಟಿ, ಬಾಲಕೃಷ್ಣ ರೈ ಸುಬ್ರಹ್ಮಣ್ಯ, ದೇವದಾಸ್ ಶೆಟ್ಟಿ ಪೆರುವಾಜೆ, ಶೀನಪ್ಪ ರೈ ಸುಬ್ರಹ್ಮಣ್ಯ, ಶಾಂತಾರಾಮ ರೈ ಸುಬ್ರಹ್ಮಣ್ಯ, ಪದ್ಮನಾಭ ರೈ ಕುಮಾರಧಾರ, ಲೋಹಿತ್ ಶೆಟ್ಟಿ ಡೆಪ್ಪಾಜೆ, ನಾರಾಯಣ ರೈ ಮೂಡಂಬೈಲು, ಲಕ್ಷ್ಮೀಶ ರೈ ಮೂಡಂಬೈಲು, ಪ್ರದೀಪ್ ರೈ ಕಡಬ, ಉಜಿರೆ ರಘುರಾಮ ಶೆಟ್ಟಿ ಮತ್ತು ಸಹೋದರರು, ರಮೇಶ್ ರೈ ನೆಟ್ಟಣಿಗೆ, ಸುಬ್ಬಯ್ಯ ರೈ ಕಡಾರು, ಶೇಷಪ್ಪ ರೈ ಸೋಮರಪೇಟೆ, ವಿಠಲ ರೈ ಸುಬ್ರಹ್ಮಣ್ಯ, ಸುಕೇಶ್ ರೈ ಮತ್ತು ಸಹೋದರರು ಮೊಡಪ್ಪಾಡಿ, ಪ್ರಭಾಕರ ಆಳ್ವ ಪಡ್ರೆ ಹಾಗೂ ಲೋಕೇಶ್ ರೈ ಬಡ್ಡಡ್ಕ ಉಪಸ್ಥಿತರಿದ್ದರು.
ಹಿರಿಯರಾದ ಸರಸ್ವತಿ ರೈ ಮೊಡಪ್ಪಾಡಿ, ಲೀಲಾವತಿ ಶೆಟ್ಟಿ ಕೋಟೆ ಹಾಗೂ ಭಾಗೀರಥಿ ರೈ ನಾಡಾಜೆ ಭಾಗವಹಿಸಿದ್ದರು.ಪ್ರಮುಖರಾದ ಗುತ್ತಿಗೆದಾರ ಸದಾಶಿವ ರೈ ಸೂರಂಬೈಲು, ಸಾಮಾಜಿಕ ಮುಂದಾಳು ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಉದ್ಯಮಿ ಪುಷ್ಪರಾಜ್ ರೈ ಕೋಟೆ, ರಾಮಕೃಷ್ಣ ಆಳ್ವ ಕೋಡಾಜೆ ಮಾಣಿ, ರಾಜೇಂದ್ರ ಪ್ರಸಾದ ರೈ ದಂಬೆಕಾನ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು












