ಅ.15 ಕುಂತೂರು ಬೇಲ್ಪಾಡಿ ಮಖಾಂ ಶರೀಫ್‌ನಲ್ಲಿ ಮಾಸಿಕ ಮಜ್ಲಿಸುನ್ನೂರು

0

ಪೆರಾಬೆ: ಎ ಮತ್ತು ಬಿ ಜುಮಾ ಮಸೀದಿ ಕುಂತೂರು ಬೇಲ್ಪಾಡಿ ಇದರ ವತಿಯಿಂದ ಪಾಣಕ್ಕಾಡ್ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್‌ರವರ ಇಜಾಝಾತ್ ಪ್ರಕಾರ ಬೇಲ್ಪಾಡಿ ಮಖಾಂ ಶರೀಫ್‌ನಲ್ಲಿ ಪ್ರತಿ ತಿಂಗಳ 3ನೇ ಗುರುವಾರ ಮಗ್ರಿಬ್ ನಮಾಝ್ ಬಳಿಕ ನಡೆಸಲ್ಪಡುವ ಮಾಸಿಕ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಅ.15ರಂದು ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ.

ತ್ರಿಕ್ಕೇರಿಪುರ ಮುನವ್ವಿರುಲ್ ಇಸ್ಲಾಂ ರಬ್ಬಾನಿಯ್ಯ ಶರೀಅತ್ ಕಾಲೇಜು ಪ್ರಿನ್ಸಿಪಾಲ್ ಹಾಫಿಳ್ ಸಯ್ಯಿದ್ ಅಬ್ದುಲ್ ಖಾದಿರ್ ಫೈಝಿ ತಂಙಳ್ ಪಟ್ಟಾಂಬಿ ನೇತೃತ್ವ ವಹಿಸಲಿದ್ದಾರೆ. ಕುಂತೂರು ಎ ಮತ್ತು ಬಿ ಜುಮಾ ಮಸೀದಿ ಅಧ್ಯಕ್ಷ ಜನಾಬ್ ಅನೀಸ್ ನೂಜಿಲ ಅಧ್ಯಕ್ಷತೆ ವಹಿಸಲಿದ್ದಾರೆ. ಕುಂತೂರು ಬೇಲ್ಪಾಡಿ ಜುಮಾ ಮಸೀದಿ ಮುದರ್ರಿಸ್ ಹಾಜಿ ಮೊಯಿದು ಫೈಝಿ ಎಡಪ್ಪಾಲ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ವಿತರಣೆ ನಡೆಯಲಿದೆ ಎಂದು ಜಮಾಅತ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here