ಕೊಳ್ತಿಗೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ

0

ಪುತ್ತೂರು: ಪಶುಚಿಕಿತ್ಸಾಲಯ ಕೊಳ್ತಿಗೆ ಮತ್ತು ಗ್ರಾಮ ಪಂಚಾಯತ್ ಕೊಳ್ತಿಗೆ ವತಿಯಿಂದ ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರ .13 ರಂದು ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರದಲ್ಲಿ ಪಶು ಇಲಾಖೆಯಿಂದ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಬಸವರಾಜ್, ಕೆ.ಪಿ. ರೋಹಿತ್ ಕೇದಂಬಾಡಿ, ಹೊರಗುತ್ತಿಗೆ ನೌಕರರಾದ ಸರೋಜ, ಈಶ್ವರಮಂಗಲ್, ಅರುಣಾ ಕೇದಂಬಾಡಿ, ಸುನಿಲ್ ಕೊಳ್ತಿಗೆ, ಪ್ರದೀಪ್ ಪಾಣಾಜೆ, ನಿವೃತ್ತ ಪಶು ಪರೀಕ್ಷಕ ಕುಮಾರ್ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿ, ಪಿಡಿಒ, ಕಾರ್ಯದರ್ಶಿ ಸಹಕಾರ ನೀಡಿದರು.

ಶಿಬಿರದಲ್ಲಿ ಒಟ್ಟು 284 ನಾಯಿಗಳಿಗೆ ಹಾಗೂ 11 ಬೆಕ್ಕುಗಳಿಗೆ ರೇಬಿಸ್ ಲಸಿಕೆ ನೀಡಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಯಿತು. ಪಶುಸಖಿಯರಾದ ಕೊಳ್ತಿಗೆ ಶೀಲಾವತಿ, ರತ್ನಾವತಿ, ಕಾವ್ಯಾ ಅವರು ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here