







ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ, ಪುತ್ತೂರು ದಸರಾ ಪ್ರಯುಕ್ತ ಅನ್ನಸಂತರ್ಪಣೆಗೆ ಬೇಕಾದ ತರಕಾರಿಯನ್ನು ಬೆಂಗಳೂರು ಹಿಂದೂ ಜಾಗರಣ ವೇದಿಕೆಯ ಮುಖಂಡ ಗೋವಿಂದರಾಜು ಬೆಂಗಳೂರುರವರು ಅ.13ರಂದು ಸೇವಾರ್ಥವಾಗಿ ನೀಡಿದರು. ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈಯವರು ಗೋವಿಂದರಾಜುರವರಿಗೆ ಶಾಲು, ಪ್ರಸಾದ, ಶಾರದಾ ದೇವಿಯ ಬೆಳ್ಳಿಯ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಪುತ್ತೂರು ಹಿಂದೂ ಜಾಗರಣ ವೇದಿಕೆಯ ಅಜಿತ್ ರೈ ಹೊಸಮನೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












