







ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಾಗೂ ಸುದೀರ್ಘ 25 ವರ್ಷಗಳ ಯಶಸ್ವಿ ಸಾರ್ವಜನಿಕ ಆಡಳಿತವನ್ನು ಪೂರೈಸಿದ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಒಂದು ತಿಂಗಳ ಸೇವಾ ಚಟುವಟಿಕೆಯ ಅಂಗವಾಗಿ, 2047 ವಿಕಸಿತ ಭಾರತ ಸಂಕಲ್ಪದಡಿ ಸೇವ ಪಾಕ್ಷಿಕದ ಪ್ರಯುಕ್ತ ದೇಶದ ಪ್ರಗತಿಗಾಗಿ ಮೋದಿ ಸಾಧನೆಯನ್ನು ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸುವ ಅಭಿಯಾನವು ಸವಣೂರಿನಲ್ಲಿ ಅ 13ರಂದು ನಡೆಯಿತು.


ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ , ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಮಂಡಲ ಕಾರ್ಯದರ್ಶಿ ಗಣೇಶ ಉದನಡ್ಕ , ಶಿವಪ್ರಸಾದ್ , ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ , ಉಪಾಧ್ಯಕ್ಷ ಚೇತನ್ ಕೋಡಿಬೈಲು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ ಕೆ, ಎಸ್ ಟಿ ಮೋರ್ಚಾ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸುರೇಶ್ ದೇಂತಾರು ಸೇರಿದಂತೆ ಪ್ರಮುಖರಾದ ಉದಯ ರೈ ಮಾದೋಡಿ , ಮಹೇಶ್ ಸವಣೂರು, ಗಿರಿಶಂಕರ ಸುಲಾಯ, ಚಂದ್ರಾವತಿ ಸುಣ್ಣಾಜೆ, ಆಶಾ ರೈ ಕಲಾಯಿ, ಜಾನಕಿ ಮುರುಳ್ಯ, ನಿರ್ಮಲಾ ಕೇಶವ ಗೌಡ, ಸುರೇಶ್ ರೈ ಸೂಡಿಮುಳ್ಳು, ಸುಪ್ರೀತ್ ರೈ, ಪ್ರಕಾಶ್ ರೈ, ತೀರ್ಥರಾಮ ಕೆಡೆಂಜಿ, ರಾಜೇಶ್ ಇಡ್ಯಾಡಿ, ಸತೀಶ್ ಅಂಗಡಿಮೂಲೆ, ಪ್ರಜ್ವಲ್ ಕೆ ಆರ್, ರಾಮಕೃಷ್ಣ ಪ್ರಭು, ಭರತ್ ರೈ, ತಾರಾನಾಥ ಬೊಳಿಯಾಲ, ಸುರೇಶ್ ದೋಳ, ಹಾಗೂ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು, ಶಕ್ತಿ ಕೇಂದ್ರಗಳ ಪ್ರಮುಖರು, ಬೂತ್ ಸಮಿತಿ ಪದಾಧಿಕಾರಿಗಳು ಹಾಗೂ ಪಕ್ಷದ ಹಿತೈಷಿಗಳು ಉಪಸ್ಥಿತರಿದ್ದರು.













