ನೆಲ್ಯಾಡಿ ಸೆಂಟ್ ಅಲ್ಫೋನ್ಸ ಚರ್ಚ್‌ನಲ್ಲಿ ಜಪಾನಿನ ‘ಕಿನುಸೈಗ’ ಫ್ಯಾಬ್ರಿಕ್ ಆರ್ಟ್ ಮಾದರಿಯ ಮಾತೆ ಮರಿಯಮ್ಮನವರ ಕಲಾಕೃತಿ ಅನಾವರಣ

0

ನೆಲ್ಯಾಡಿ: ಇಲ್ಲಿನ ಸೆಂಟ್ ಅಲ್ಫೋನ್ಸ ಧರ್ಮಕ್ಷೇತ್ರದ ಯುವ ಸಂಚಾಲನದ (ಎಸ್‌ಎಂವೈಎಂ) ವತಿಯಿಂದ ಸಿದ್ಧಪಡಿಸಲಾದ ಜಪಾನಿನ ಪ್ರಸಿದ್ಧ ‘ಕಿನುಸೈಗ’ ಫ್ಯಾಬ್ರಿಕ್ ಆರ್ಟ್ ಮಾದರಿಯ ವಿನೂತನ ಮಾತೆ ಮರಿಯಮ್ಮನವರ ಕಲಾಕೃತಿಯನ್ನು ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಮಾರ್ ಜೇಮ್ಸ್ ಪಟ್ಟೇರಿಲ್ ಅವರು ಉದ್ಘಾಟಿಸಿ ಅನಾವರಣಗೊಳಿಸಿದರು.

ಉದನೆ ಯ Rev. Fr.ರಿಜೊ, Rev. Fr. ಶಿಬಿ ಆರ್ಲ, Rev. Fr. ಜಿನ್ಸ್ ಅಡ್ಡ ಹೊಳೆ. Rev. Fr. ಬಿನೋಯ್ ಜೋಸೆಫ್ ಶಿರಾಡಿ ಧರ್ಮ ಪ್ರಾಂತಿಯ ಚಾನ್ಸಲರ್ Rev fr ಲಾರೆನ್ಸ್ ಪೂಣೋಲಿಲ್ ಟ್ರಸ್ಟಿ ಗಳಾದ ರಾಜೇಶ್, ಸೇಬಾಷ್ಟಿಯನ್ ಇವರ ಉಪಸ್ಥಿತಿಯಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ರೆ ಫಾ. ಶಾಜಿ ಮಾತ್ಯು ಸ್ವಾಗತಿಸಿ ಮಾಹಿತಿ ನೀಡಿದರು.

ಟೈಲರಿಂಗ್ ಅಂಗಡಿಗಳಲ್ಲಿ ಬಳಕೆಯ ನಂತರ ಉಳಿಯುವ ಬಟ್ಟೆಯ ಚೂರುಗಳನ್ನು ಸೃಜನಾತ್ಮಕವಾಗಿ ಜೋಡಿಸಿ, ಸುಂದರ ವಿನ್ಯಾಸದ ಮೂಲಕ ರೂಪಿಸಲಾದ ಈ ಅಪರೂಪದ ಕಲಾಕೃತಿ ನೋಡುಗರ ಗಮನ ಸೆಳೆಯುತ್ತಿದೆ. ಕಲಾತ್ಮಕತೆ ಮತ್ತು ಪರಿಸರ ಕಾಳಜಿಯನ್ನು ಒಟ್ಟುಗೂಡಿಸಿರುವ ಈ ವಿಶಿಷ್ಟ ಪ್ರಯತ್ನಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನೂರಾರು ಮಂದಿ ನೆಲ್ಯಾಡಿ ಸೆಂಟ್ ಅಲ್ಫೋನ್ಸ ಚರ್ಚ್‌ಗೆ ಭೇಟಿ ನೀಡಿ, ಮಾತೆ ಮರಿಯಮ್ಮನವರ ಈ ಕಲಾಕೃತಿಯನ್ನು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಶೇಷ ಕಲಾಕೃತಿಯ ನಿರ್ಮಾಣದಲ್ಲಿ ಯುವ ಸಂಚಾಲನದ ಸದಸ್ಯರಾದ ದಿಶಾ, ಡಿನು, ಜೈಸನ್,ಜಿತು, ಸನುಷಾ, ಅಭಿನ್, ಜೋಯಲ್, ನವೀನ್, ಲಿಟ್ಟೋ, ಶಾನ್, ಅನೂಪ್ ಮತ್ತು ಆಷ್ಟನ್ ಹಾಗೂ ಮಾತೃವೇದಿಯ ಸದಸ್ಯರಾದ ರೋಸಾ ಕುಟ್ಟಿಚ್ಚಿರ, ಬಿಂದು ಜಯೇಶ್, ಶೋಲಿ ಜಾರ್ಜ್ ಮತ್ತು ಪ್ರಿನ್ಸಿ ರಾಜೇಶ್ ಅವರು ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸಿದರು.
ನೆಲ್ಯಾಡಿ ಸೆಂಟ್ ಅಲ್ಫೋನ್ಸ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಷಾಜಿ ಮ್ಯಾಥ್ಯೂ ಅವರ ಮಾರ್ಗದರ್ಶನದಲ್ಲಿ ಈ ಸೃಜನಾತ್ಮಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

LEAVE A REPLY

Please enter your comment!
Please enter your name here