







ಗ್ರೈಂಡ್ ಈಝಿ ಟೇಬಲ್ ಟಾಪ್ ಗ್ರೈಂಡರ್ ಗೆ ಪ್ಲಾಟ್ ಶೇ.40 ತನಕ ರಿಯಾಯಿತಿ


ಪುತ್ತೂರು: ನೀವೂ ಮನೆಗೆ ಹೊಸ ಗ್ರೈಂಡರ್ ಖರೀದಿಸಲು ಅಥವಾ ಹಳೆಯ ಗ್ರೈಂಡರ್ ಬದಲಾಯಿಸಲು ಯೋಚಿಸುತ್ತಿದ್ದೀರಾ….ಹಾಗಾದರೆ ಇಲ್ಲಿದೆ ಉತ್ತಮ ಅವಕಾಶ. ಕಲ್ಲರ್ಪೆಯ ಓಂ ಶಿವ ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ನಿರ್ಮಾಣಗೊಳ್ಳುವ `ಗ್ರೈಂಡ್ ಈಝಿ‘ (Grind Easy) ಟೇಬಲ್ ಟಾಪ್ ಗ್ರೈಂಡರ್ಗಳ ಮೇಲೆ ನವರಾತ್ರಿ ಹಬ್ಬದ ಕೊಡುಗೆಯಾಗಿ ಶೇ. 40ರ ತನಕ ವಿಶೇಷ ರಿಯಾಯಿತಿ ನೀಡಲಾಗುತ್ತಿದ್ದು ಗುಣಮಟ್ಟದ ಗ್ರೈಂಡರ್ಗಳನ್ನು ಕೈಗೆಟಕುವ ದರದಲ್ಲಿ ಖರೀದಿಸಲು ಇದು ಸಕಾಲವಾಗಿದೆ.
ಅರೆಯುವ ಕಲ್ಲಿಗೆ ಪ್ರಸಿದ್ಧಿ ಪಡೆದಿರುವ ಕಲ್ಲರ್ಪೆಯ ಕಲ್ಲಿನ ಗುಣಮಟ್ಟವನ್ನು ಮನೆಯ ಅಡುಗೆ ಮನೆಗೆ ತರುವ ಗ್ರೈಂಡ್ ಈಝಿ ಟೇಬಲ್ ಟಾಪ್ ಗ್ರೈಂಡರ್ಗಳು, ಹಬ್ಬದ ಸಂಭ್ರಮದೊಂದಿಗೆ ಮನೆಗೆ ಉಪಯುಕ್ತ ಸಾಧನವನ್ನು ಸೇರಿಸಿಕೊಳ್ಳಲು ನೆರವಾಗಲಿವೆ. ಗುಣಮಟ್ಟ, ಬಾಳಿಕೆ, ಆಕರ್ಷಕ ವಿನ್ಯಾಸ ಹಾಗೂ ಬಹುಪಯೋಗಿ ಸೌಲಭ್ಯಗಳನ್ನು ಹೊಂದಿರುವ ಗ್ರೈಂಡ್ ಈಝಿ ಟೇಬಲ್ ಟಾಪ್ ಗ್ರೈಂಡರ್ಗಳನ್ನು ನವರಾತ್ರಿ ಹಬ್ಬದ ಪ್ರಯುಕ್ತ ಶೇ. 40ರ ತನಕ ರಿಯಾಯಿತಿಯಲ್ಲಿ ಖರೀದಿಸಬಹುದು. ಮನೆಗೆ ಹೊಸ ಗ್ರೈಂಡರ್ ಖರೀದಿಸಲು ಅಥವಾ ಹಳೆಯ ಗ್ರೈಂಡರ್ ಬದಲಾಯಿಸಲು ಯೋಚಿಸುತ್ತಿರುವವರಿಗೆ ಈ ಹಬ್ಬದ ಕೊಡುಗೆ ಉತ್ತಮ ಅವಕಾಶವಾಗಿದೆ.
ಕಲ್ಲರ್ಪೆಯ ಕಲ್ಲು, ಗುಣಮಟ್ಟದ ಭರವಸೆ:
ಇದು ಸಾಮಾನ್ಯ ಗ್ರೈಂಡರ್ ಅಲ್ಲ. ಅರೆಯುವ ಕಲ್ಲಿಗೆ ಹೆಸರುವಾಸಿಯಾಗಿರುವ ಕಲ್ಲರ್ಪೆಯ ಪ್ರಸಿದ್ಧ ಕಲ್ಲನ್ನು ಬಳಸಿ ನಿರ್ಮಿಸಿರುವ ಗುಣಮಟ್ಟದ ಟೇಬಲ್ ಟಾಪ್ ಗ್ರೈಂಡರ್ ಎಂಬುದು ಇದರ ವಿಶೇಷತೆ. ಮಾಣಿ-ಮೈಸೂರು ಹೆದ್ದಾರಿಯ ಸಂಪ್ಯ ಸಮೀಪದ ಕಲ್ಲರ್ಪೆಯ ಪಾಪ್ಯುಲರ್ ಫ್ಯಾಕ್ಟರಿ ಮುಂಭಾಗದಲ್ಲಿರುವ ಓಂ ಶಿವ ಇಂಜಿನಿಯರಿಂಗ್ ವರ್ಕ್ಸ್ ನ ವಿನೂತನ ಪ್ರಯತ್ನವಾಗಿ ಈ ಗ್ರೈಂಡರ್ಗಳು ರೂಪುಗೊಂಡಿವೆ. ಸಾಮಾನ್ಯವಾಗಿ ದೊಡ್ಡ ಗ್ರೈಂಡರ್ಗಳಲ್ಲಿ ಬಳಸುವ ಕಲ್ಲರ್ಪೆಯ ಕಲ್ಲಿನ ಗುಣಮಟ್ಟವನ್ನು ಸಣ್ಣ ಗಾತ್ರದ ಟೇಬಲ್ ಟಾಪ್ ಗ್ರೈಂಡರ್ಗಳಲ್ಲಿಯೂ ಪರಿಚಯಿಸಿರುವುದು ವಿಶೇಷ. ಮನೆಯ ಅಡುಗೆ ಮನೆಗೆ ಹೊಂದಿಕೊಳ್ಳುವ ಆಕರ್ಷಕ ವಿನ್ಯಾಸ, ಸರಳ ಬಳಕೆ ಹಾಗೂ ಸುಲಭ ನಿರ್ವಹಣೆಯೊಂದಿಗೆ ಈ ಗ್ರೈಂಡರ್ಗಳು ಗೃಹಿಣಿಯರ ಕೆಲಸವನ್ನು ಹಗುರಗೊಳಿಸಲಿವೆ.
ಮೂರು ಮಾದರಿಗಳಲ್ಲಿ ಲಭ್ಯ:
ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಎರಡು, ಎರಡೂವರೆ ಹಾಗೂ ಮೂರು ಲೀಟರ್ ಸಾಮರ್ಥ್ಯದ ಮೂರು ಮಾದರಿಗಳಲ್ಲಿ ಗ್ರೈಂಡ್ ಈಝಿ ಟೇಬಲ್ ಟಾಪ್ ಗ್ರೈಂಡರ್ಗಳು ಲಭ್ಯವಿವೆ. ಸಂಪೂರ್ಣ ಕಾಪರ್ ಕಾಯಿಲ್ ಬಳಸಿ ನಿರ್ಮಿಸಲಾಗಿರುವ ಮೋಟಾರ್ ದೀರ್ಘಕಾಲ ಬಾಳಿಕೆ ಬರುವಂತೆ ರೂಪಿಸಲಾಗಿದೆ. ಕಾಂಪ್ಯಾಕ್ಟ್ ವಿನ್ಯಾಸ ಹೊಂದಿರುವುದರಿಂದ ಅಡುಗೆಮನೆಯಲ್ಲಿ ಹೆಚ್ಚು ಜಾಗದ ಅಗತ್ಯವಿಲ್ಲ.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸ್ಥಳಾಂತರಿಸಬಹುದಾಗಿದೆ:
ಸ್ವಚ್ಛತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗ್ರೈಂಡರ್ನ ಕಲ್ಲನ್ನು ತೆಗೆದು, ಅರೆಯಲಾದ ಪದಾರ್ಥಗಳನ್ನು ಹೊರತೆಗೆದ ಬಳಿಕ ಸುಲಭವಾಗಿ ಸ್ವಚ್ಛಗೊಳಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಕಲ್ಲಿನ ತೂಕವನ್ನು ಸಮರ್ಪಕವಾಗಿ ಹೊಂದಿಸಿರುವುದರಿಂದ ದೈನಂದಿನ ಬಳಕೆಯಲ್ಲಿಯೂ ಅನುಕೂಲಕರವಾಗಿದೆ.
ಅರೆಯುವುದಷ್ಟೇ ಅಲ್ಲ, ಇನ್ನಷ್ಟು ಉಪಯೋಗ:
ಗ್ರೈಂಡ್ ಈಝಿ ಟೇಬಲ್ ಟಾಪ್ ಗ್ರೈಂಡರ್ನಲ್ಲಿ ಹಿಟ್ಟು ಅರೆಯುವುದರ ಜತೆಗೆ ತೆಂಗಿನಕಾಯಿ ತುರಿಯುವ ಸ್ಕ್ರೇಪರ್ ಹಾಗೂ ಚಪಾತಿ ಹಿಟ್ಟು ಮಿಶ್ರಣ ಮಾಡುವ ವ್ಯವಸ್ಥೆಯೂ ಇದೆ. ಒಂದೇ ಯಂತ್ರದಲ್ಲಿ ಹಲವು ಕೆಲಸಗಳನ್ನು ನಿರ್ವಹಿಸಬಹುದಾದ ಕಾರಣ ಅಡುಗೆಮನೆಯ ಕೆಲಸವನ್ನು ಸರಳಗೊಳಿಸಲು ಇದು ಸಹಕಾರಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಲ್ಲರ್ಪೆಯಲ್ಲಿರುವ ಮಳಿಗೆ ಅಥವಾ ದೂರವಾಣಿ 9741896603, 9448297325 ನಂಬರನ್ನು ಸಂಪರ್ಕಿಸಬಹುದು.













