







ಪುತ್ತೂರು: ಕಳೆದ ಹಲವಾರು ವರ್ಷಗಳಿಂದ ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಮೆಜೆಸ್ಟಿಕ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನ್ಯೂ ಹೇಮಾ ಇಲೆಕ್ಟ್ರಿಕಲ್ ಸಂಸ್ಥೆಯು ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.
ವೈದಿಕರಾದ ವಿದ್ಯಾನಂದ ಭಟ್ರವರ ನೇತೃತ್ವದಲ್ಲಿ ಗಣಹೋಮ ಹಾಗೂ ಲಕ್ಷ್ಮೀ ಪೂಜೆ ನೆರವೇರಿತು.ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವ್ಯವಸ್ಥಾಪಕ ಹರೀಶ್ ನಾಯಕ್, ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಸುದ್ದಿ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ತಲಪಾಡಿ ಹಾಗೂ ಗ್ರಾಹಕರು ಹಿತೈಷಿಗಳು ಆಗಮಿಸಿ ಶುಭಹಾರೈಸಿದರು. ನಮ್ಮಲ್ಲಿ ಮಿಕ್ಸಿ, ಫ್ಯಾನ್, ಗ್ರೈಂಡರ್ ದುರಸ್ಥಿ ಹಾಗೂ ವೈಂಡಿಂಗ್ ಮಾಡಿ ಕೊಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ವಾಸುದೇವ ನಾಯಕ್ ತಿಳಿಸಿದ್ದಾರೆ.












