







ಉಪ್ಪಿನಂಗಡಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಹಮ್ಮಿಕೊಂಡಿರುವ ಗಿರಿಜಾ ಕಲ್ಯಾಣೋತ್ಸವದ ಆಮಂತ್ರಣ ಪತ್ರವನ್ನು ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ಬಿಡುಗಡೆಗೊಳಿಸಲಾಯಿತು.


ಈ ಸಂಧರ್ಭದಲ್ಲಿ ಮಾತನಾಡಿದ ಆಧ್ಯಾತ್ಮಿಕ ಸಾಧಕ ಶ್ರೀಕೃ? ಶೆಣೈ, ಧಾರ್ಮಿಕ ಕಾರ್ಯಕ್ರಮಗಳು ಹಿಂದೂ ಸಮಾಜದ ಏಕತೆ ಮತ್ತು ಐಕ್ಯತೆಗೆ ಬಹಳ? ಶಕ್ತಿ ಕೊಡುತ್ತದೆ. ಧಾರ್ಮಿಕ ಕಾರ್ಯಕ್ರಮಗಳಿಂದ ಮಾತ್ರ ಹಿಂದೂ ಸಮಾಜವನ್ನು ಒಗ್ಗೂಡಿಸಲು ಸಾಧ್ಯ ಎನ್ನುವುದು ಅನೇಕ ಸಂಧರ್ಭದಲ್ಲಿ ನಮ್ಮ ಅನುಭವಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ವ?ಗಳಿಂದ ಧರ್ಮ ಜಾಗೃತಿ ಕಾರ್ಯಕ್ರಮಗಳ ಮೂಲಕ ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಕೆಲಸ ಪುತ್ತಿಲ ಪರಿವಾರದ ಮೂಲಕ ಸಾಕಾರಗೊಂಡಿದೆ. ಈ ವ? ನಡೆಯುವ ಗಿರಿಜಾ ಕಲ್ಯಾಣೋತ್ಸವ ಮತ್ತು ಕೇಸರಿ ಸಂಗಮದಲ್ಲಿ ಹಿಂದೂ ಸಮಾಜದ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಈ ಹಿಂದೂ ಧರ್ಮದ ಕಾರ್ಯಕ್ರಮಕ್ಕೆ ನಾವು ಸಾಕ್ಷಿಗಳಾಗೋಣ. ಜಾತಿ, ರಾಜಕೀಯ ಎಲ್ಲಾ ಬಿಟ್ಟು ನಾವೆಲ್ಲರೂ ಹಿಂದೂ ಧರ್ಮಕ್ಕಾಗಿ ನಾವು ಒಂದಾಗೋಣ ಎಂದರು.



ವೇದಿಕೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಡಾ. ಅಖಿಲೇಶ್ ಪಾಣಾಜೆ, ಕಾರ್ಯಾಧ್ಯಕ್ಷ ಅನಿಲ್ ಕಣ್ಣಾರ್ನೂಜಿ, ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿಯಾದ ಅನಿಲ್ ತೆಂಕಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಹಿರಿಯ ಧಾರ್ಮಿಕ ಮುಂದಾಳು ಶಂಕರ ನಾರಾಯಣ ಭಟ್ ಬೊಳ್ಳಾವು, ಗೌರವಾಧ್ಯಕ್ಷ ಸುಜೀರ್ ಗಣಪತಿ ನಾಯಕ್, ರವಿ ಕುಮಾರ್ ರೈ, ಉಪಸ್ಥಿತರಿದ್ದರು. ಪ್ರಶಾಂತ್ ನೆಕ್ಕಿಲಾಡಿ ಸ್ವಾಗತಿಸಿದರು, ಧರ್ಣಪ್ಪ ನ್ಯಾಕ್ ವಂದಿಸಿದರು.










