ಪಡೀಲು ಬಾಳಪ್ಪ ಕಾಂಪ್ಲೆಕ್ಸ್‌ನಲ್ಲಿ ‘ಓಲ್‌ಟೌನ್ಸ್ ಸೂರ್ಯಮಾರ್ಟ್’ ಶುಭಾರಂಭ

0

ಮನೆ ಬಳಕೆಯ ಗುಣಮಟ್ಟದ ಎಲ್ಲಾ ಸಾಮಾಗ್ರಿಗಳು ಒಂದೇ ಸೂರಿನಡಿಯಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯ

ಪುತ್ತೂರು: ಗ್ರಾಹಕರಿಗೆ ಒಂದೇ ಸೂರಿನಡಿ ದಿನಸಿ, ಹಣ್ಣು-ತರಕಾರಿ ಸೇರಿದಂತೆ ಗೃಹಬಳಕೆಯ ಅಗತ್ಯ ವಸ್ತುಗಳನ್ನು ಕೈಗೆಟುಕುವ ದರದಲ್ಲಿ ಖರೀದಿಸುವ ಅವಕಾಶ. ಕರ್ನಾಟಕದ 46ಕ್ಕೂ ಹೆಚ್ಚು ನಗರ, ಪಟ್ಟಣಗಳಲ್ಲಿ ಕಾರ್ಯಾಚರಿಸುತ್ತಿರುವ ‘ಓಲ್‌ಟೌನ್ಸ್’ ಸೂರ್ಯ ಮಾರ್ಟ್ ಇದೀಗ ಪುತ್ತೂರಿಗೂ ಕಾಲಿಟ್ಟಿದ್ದು ಪುತ್ತೂರು-ಉಪ್ಪಿನಂಗಡಿ ರಸ್ತೆಯ ಪಡೀಲು ಬಾಳಪ್ಪ ಕಾಂಪ್ಲೆಕ್ಸ್‌ನಲ್ಲಿ ಅ.15ರಂದು ನೂತನ ಮಳಿಗೆ ಶುಭಾರಂಭಗೊಂಡಿತು.


ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕುಂಟಾರು ರವೀಶ ತಂತ್ರಿಗಳು ಮಾತನಾಡಿ, ಕಾಲ ಬದಲಾದಂತೆ ಎಲ್ಲಾ ವ್ಯವಸ್ಥೆಗಳು ಬದಲಾವಣೆಯತ್ತ ಸಾಗುತ್ತದೆ. ಇಂದಿನ ಒತ್ತಡಗಳ ಜೀವನದ ಮಧ್ಯೆ ದಿನನಿತ್ಯದ ಅವಶ್ಯಕ ಸಾಮಾಗ್ರಿಗಳನ್ನು ಹುಡುಕಿ ಪಡೆಯುವ ಬದಲು ಜನ ಒಂದೇ ಕಡೆ ಅಪೇಕ್ಷೆ ಪಡೆಯುತ್ತಿದ್ದು ಸಮಾಜಕ್ಕೆ ಇಂತಹ ಸೂಪರ್ ಮಾರ್ಟ್‌ಗಳ ಆವಶ್ಯಕವಾಗಿದೆ. ಪುತ್ತೂರಿನ ಜನತೆಗೆ ಅವಶ್ಯಕವಾದ ಮಳಿಗೆಯಾಗಿದ್ದು ಮ್ಹಾಲಕ ಓಂಪ್ರಕಾಶ್ ಅವರ ನಗುಮೊಗದ ಸೇವೆ ಜನರನ್ನು ಆಕರ್ಷಿಸುವಂತಾಗಲಿ ಎಂದು ಹಾರೈಸಿದರು.


ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಸೂಪರ್ ಮಾರ್ಟ್‌ಗಳು ಅವಶ್ಯಕತೆಯಿದೆ. ಸಂಸ್ಥೆಯು ಬದ್ದತೆ ಮತ್ತು ಸೇವಾ ತತ್ಪರತೆಯೊಂದಿಗೆ ಬೆಳೆದು ಪುತ್ತೂರಿನ ಜನತೆಗೆ ಉತ್ತಮ ಸೇವೆ ದೊರೆಯಲಿ. ಪುತ್ತೂರಿನ ಇನ್ನಷ್ಟು ಭಾಗಗಳಲ್ಲಿ ಮಳಿಗೆಗಳು ಪ್ರಾರಂಭಗೊಳ್ಳಲಿ. ಜನತೆಯು ಇಂತಹ ಮಳಿಗೆಗಳಿಗೂ ಸಹಕಾರ ನೀಡಬೇಕು ಎಂದು ಹೇಳಿದರು.


ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸೂಪರ್ ಮಾರ್ಟ್‌ನಲ್ಲಿ ಸಾಮಾಗ್ರಿಗಳನ್ನು ಅಗ್ಗದ ದರದಲ್ಲಿ ಆಯ್ಕೆ ಮಾಡುವ ಅವಕಾಶದ ಜೊತೆಗೆ ಆರ್ಥಿಕ ಚಟುವಟಿಕೆಗಳಿಗೆ ವೃದ್ಧಿಯಾಗಲಿದೆ. ಜೊತೆಗೆ ಉದ್ಯೋಗಗಳು ಸೃಷ್ಠಿಯಾಗುತ್ತಿದೆ. ಜಿಲ್ಲಾ ಕೇಂದ್ರವಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಪುತ್ತೂರಿಗೆ ಇಂತಹ ಮಳಿಗೆಗಳು ಪೂರಕವಾಗಿದೆ. ಮಿತ ದರದಲ್ಲಿ ಅಗತ್ಯ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸೂರ್ಯಮಾರ್ಟ್ ಮೂಲಕ ದೊರೆಯಲಿದ್ದು ಪಡೀಲು ಪರಿಸರದ ಜನ ಸಂಭ್ರಮಿಸುವಂತಾಗಿದೆ ಎಂದರು.


ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ ಕುಮಾರ್ ಸೊರಕೆ ಮಾತನಾಡಿ, ಇಂದಿನ ಫ್ಯಾಶನ್ ಯುಗದಲ್ಲಿ ಜನರಿಗೆ ಇಂತಹ ಮಳಿಗೆಗಳು ಅವಶ್ಯಕ. ಜನರಿಗೆ ಅವಶ್ಯಕವಾದ ಸಾಮಾಗ್ರಿಗಳನ್ನು ಕೇಳಿ ಪಡೆಯುವ ಪರಿಪಾಠವಿಲ್ಲದೆ ತಾವೇ ಆಯ್ಕೆ ಮಾಡುವ ಅವಕಾಶ ಸೂಪರ್ ಮಾರ್ಟ್‌ಗಳಲ್ಲಿ ಲಭ್ಯವಿದೆ. ಸಂಸ್ಥೆಯ ಮ್ಹಾಲಕ ಓಂಪ್ರಕಾಶ್ ನೇತೃತ್ವದಲ್ಲಿ ಇನ್ನಷ್ಟು ಮಳಿಗೆಗಳು ಪ್ರಾರಂಭವಾಗಲಿ ಎಂದು ಶುಭಹಾರೈಸಿದರು.


ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿರುವ ನ್ಯಾಯವಾದಿ ಚಿದಾನಂದ ಬೈಲಾಡಿ ಮಾತನಾಡಿ, ಮಾನವನ ಬದುಕಿನ ಶೈಲಿ ಬದಲಾಗುವ ಕಾಲದಲ್ಲಿ ಜನರಿಗೆ ಎಲ್ಲವೂ ಸುಲಭವಾಗಿ ಪಡೆಯಬೇಕು. ದಿನನಿತ್ಯದ ಅವಶ್ಯಕ ಸಾಮಾಗ್ರಿಗಳು ಒಂದೇ ಸೂರಿನಡಿಯಲ್ಲಿ ಸೂಪರ್ ಮಾರ್ಟ್‌ಗಳಲ್ಲಿ ದೊರೆತಾಗ ಜನರೂ ಅದಕ್ಕೆ ತಕ್ಕಂತೆ ಬದಲಾಗಿ ಜೀವನ ಉತ್ತಮವಾಗಿಸಲು ಮಾರ್ಟ್ ಸಹಕಾರಿಯಾಗಿದೆ. ಪುತ್ತೂರು ಬೆಳೆಯುತ್ತಿದ್ದು ಇಂತಹ ಮಳಿಗೆ ಅನಿವಾರ್ಯವಾಗಿದೆ ಎಂದು ಹೇಳಿದರು.


ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು, ಕೊಡಗು ಗೌಡ ಸಂಘದ ಅಧ್ಯಕ್ಷ ಆನಂದ ಕರಂದ್ಲಾಜೆ, ನ್ಯಾಯವಾದಿ ಜಯಾನಂದ ಕೆ., ಕಟ್ಟಡದ ಮ್ಹಾಲಕ ಬಾಳಪ್ಪ ಪೂಜಾರಿ ಕೇಪುಳು, ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಮುಖಂಡ ಅಜಿತ್ ರೈ ಹೊಸಮನೆ, ಟೌನ್‌ಬ್ಯಾಂಕ್ ನಿರ್ದೇಶಕ ಕಿರಣ್ ಕುಮಾರ್ ರೈ, ನಿವೃತ್ತ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ ಹೆಗಡೆ ಸಹಿತ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.
ನಿವೃತ್ತ ಶಿಕ್ಷಕ ಕೆ.ವಿ ಮಾಧವ ಕರಂದ್ಲಾಜೆ ಸ್ವಾಗತಿಸಿ, ವಂದಿಸಿದರು. ಮ್ಹಾಲಕ ಓಂಪ್ರಕಾಶ್ ಕರಂದ್ಲಾಜೆ ಮತ್ತು ಹರಿಣಿ ಓಂಪ್ರಕಾಶ್ ಅತಿಥಿಗಳನ್ನು ಸ್ಮರಣಿಕ ನೀಡಿ ಗೌರವಿಸಿದರು.

ಎಲ್ಲಾ ತರದ ಜಿನಸು ಸಾಮಾಗ್ರಿಗಳು, ತರಕಾರಿಗಳು, ಹಣ್ಣು ಹಂಪಲುಗಳು, ಪ್ಲಾಸಿಕ್ ಸಾಮಾಗ್ರಿಗಳ ಸಹಿತ ಎಲ್ಲಾ ರೀತಿಯ ಮನೆಯಲ್ಲಿ ದಿನ ಬಳಕೆಯ ವಸ್ತುಗಳು ಓಲ್‌ಟೌನ್ಸ್ ಮಾರ್ಟ್‌ನಲ್ಲಿ ಒಂದೇ ಸೂರಿನಡಿ ಕೈಗೆಟುಕುವ ದರದಲ್ಲಿ ಲಭ್ಯವಿದೆ. ನೂರಕ್ಕೂ ಅಧಿಕ ಉತ್ಪನ್ನಗಳ ಮೇಲೆ ಒಂದು ಖರೀದಿಸಿದರೆ ಇನ್ನೊಂದು ಉಚಿತ, ಜೊತೆಗೆ 1 ಲೀಟರ್ ಗೋಲ್ಡ್ ವಿನ್ನರ್ ಆಯಿಲ್ ರೂ.169, ಒಂದು ಕೆಜಿ ತೊಗರಿ ಬೇಳೆಗೆ ರೂ.128, ಒಂದು ಕೆಜಿ ಕಡಲೆ ಬೀಜಕ್ಕೆ ರೂ.78, 2 ಲೀಟರ್ ಫ್ಯಾಬ್ ಲಿಕ್ವಿಡ್‌ಗೆ ರೂ.199, 26ಕೆಯ ಎಸ್,ಬಿ ಗೋಲ್ಡ್ ಅಕ್ಕಿ ಕೇವಲ ರೂ.2020ಕ್ಕೆ ಗ್ರಾಹಕರ ಕೈ ಸೇರಲಿದೆ. ಉತ್ತಮ ಗುಣಮಟ್ಟಡ ಸಾಮಾಗ್ರಿಗಳನ್ನು ಅತೀ ಕಡಿಮೆ ಬೆಲೆಯಲ್ಲಿ ಜನತೆ ನೀಡುತ್ತಿದೆ. ಹಬ್ಬ ಹರಿದಿನಗಳು ಹಾಗೂ ಆರಂಭದ ದಿನಗಳಲ್ಲಿ ಗ್ರಾಹಕರಿಗೆ ಉಚಿತ ಗಿಫ್ಟ್ ಸೆಟ್‌ಗಳು ಮತ್ತು ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತದೆ. ಸೂಪರ್ ಮಾರ್ಕೆಟ್‌ನ ಶುಭಾರಂಭದ ಅಂಗವಾಗಿ ಪ್ರಥಮವಾಗಿ ಬರುವ 200 ಗ್ರಾಹಕರಿಗೆ ರೂ.1,೦೦೦ ಮುಖಬೆಲೆಯ ಉಚಿತ ವೋಚರ್‌ಗಳನ್ನು ನೀಡಲಾಗುತ್ತಿದೆ. ಮಳಿಗೆಯಿಂದ 5 ಕೀ.ಮೀ ವ್ಯಾಪ್ತಿಯಲ್ಲಿ ಉಚಿತವಾಗಿ ಮನೆ ಬಾಗಿಲಿಗೆ ಸಾಮಾಗ್ರಿಗಳನ್ನು ತಲುಪಿಸಲಿದೆ. ಈ ಎಲ್ಲಾ ರಿಯಾಯಿತಿಗಳಿಗೂ ಷರತ್ತುಗಳು ಅನ್ವಯಿಸಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here