ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸಾಧನ ಸಲಕರಣೆಗಳ ವಿತರಣೆ

0

ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಪ್ರಯತ್ನ-ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಪುತ್ತೂರಿನಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ನೀಡುವಂತೆ ಒತ್ತಾಯಿಸಿ ಸರಕಾರಕ್ಕೆ ಮನವಿ ಮಾಡುವುದಾಗಿ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಕ್ಷೇತ್ರ ಶಿಕ್ಷಣಾಧಿಕಾರಿಯವ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಆಶ್ರಯದಲ್ಲಿ ಅ.15ರಂದು ನೆಲ್ಲಿಕಟ್ಟೆಯಲ್ಲಿ ವಿಶೇಷ ಅಗತ್ಯ ಉಳ್ಳ ಮಕ್ಕಳಿಗೆ ಸಾಧನ, ಸಲಕರಣೆಗಳ ವಿತರಿಸಿ ಅವರು ಮಾತನಾಡಿದರು. ವಿಶೇಷ ಚೇತನ ಮಕ್ಕಳಿಗೆ ಆವಶ್ಯಕವಾದಂತಹ ಸವಲತ್ತುಗಳನ್ನು ಸರಕಾರದಿಂದ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜೊತೆಗೆ ಉದ್ಯಮ ನಡೆಸಲು ಆಸಕ್ತಿಯುಳ್ಳ ಮಹಿಳೆಯರಿಗೂ ಸರಕಾರದಿಂದ ಆರ್ಥಿಕ ನೆರವು ನೀಡುತ್ತಿದ್ದು ಜೆರಾಕ್ಸ್ ಅಂಗಡಿ, ಕ್ಯಾಂಟೀನ್ ಸರಕಾರದಿಂದ ಅನುದಾನ ಒದಗಿಸಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು.


ತಾಯಂದಿರು ಧೈರ್ಯ ಕಳೆದುಕೊಳ್ಳಬಾರದು ವಿಕಲ ಚೇತನ ಮಕ್ಕಳ ಪಾಲನೆಯ ನೋವು ಯಾರಿಗೂ ಬೇಡ. ಅವರ ನೋವನ್ನು ಯಾರಿಂದರೂ ನಿವಾರಣೆ ಮಾಡಲು ಅಸಾಧ್ಯ. ಸರಕಾರದಿಂದ ಮಾಸಾಸನ ವಿವಿಧ ಸವಲತ್ತುಗಳನ್ನು ನೀಡಬಹುದು ಆದರೆ ಅವರ ನೋವನ್ನು ಸಂಪೂರ್ಣವಾಗಿ ನಿವಾರಿಸುವುದು ಅಸಾಧ್ಯ. ಇಂತಹ ಮಕ್ಕಳಲ್ಲಿ ಯಾವ ಸಾಧನೆಯನ್ನು ಬಯಸುವುದಿಲ್ಲ. ಅವರ ಕೆಲಗಳನ್ನು ಅವರೇ ಮಾಡಿಕೊಂಡರೆ ಸಾಕು ಎಂಬ ಭಾವನೆ ಎಲ್ಲರಲ್ಲಿದೆ. ತಾಯಂದಿರು ಧೈರ್ಯಕಳೆಕೊಳ್ಳಬಾರದು. ನೀವು ಧೈರ್ಯ ಕಳೆದುಕೊಂಡರೆ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಮಕ್ಕಳನ್ನು ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆ ಕಳುಹಿಸಬೇಕು. ಮಕ್ಕಳು ಶಾಲೆ ಹೋದಾಗ ಅಷ್ಟು ಸಮಯ ತಾಯಂದಿರ ಮನಸ್ಸಿಗೂ ನೆಮ್ಮದಿ, ಜೊತೆಗೆ ಮಕ್ಕಳು ಶಾಲೆಗಳಲ್ಲಿ ಕಲಿತು ಸಾಧನೆಗೆ ಸಹಕಾರಿ. ಹೀಗಾಗಿ ಪ್ರತಿಯೊಬ್ಬರ ಪೋಷಕರು ವಿಷೇಶ ಅಗತ್ಯವುಳ್ಳ ಮಕ್ಕಳನ್ನು ಮನೆಯಲ್ಲಿಯೇ ಕೂರಿಸದೇ ಶಾಲೆಗಳಿಗೆ ಕಳುಹಿಸುವಂತೆ ಶಾಸಕರು ವಿನಂತಿಸಿದರು.

102 ಮಂದಿಗೆ ವಿತರಣೆ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್ ಮಾತನಾಡಿ, ಒಂದರಿಂದ ಹತ್ತನೇ ತರಗತಿ ವರೆಗೆ ದಾಖಲಾಗಿರುವ ವಿಶೇಷ ಚೇತನ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 52 ಮಂದಿಗೆ ಟಿಎಲ್‌ಎಮ್ ಕಿಟ್, 20ಮಂದಿಗೆ ವ್ಹೀಲ್ ಚೆಯರ್, 19 ಮಂದಿದೆ ರೊಲ್ಟರ್, ದೃಷ್ಠಿದೋಷವಿರುವ ಇಬ್ಬರಿಗೆ ಯುನಿವರ್ಸಲ್ ಬ್ರೆಂಲ್ ಹಾಗೂ ಶ್ರಾವಣ ದೋಷವಿರುವ 9 ಮಂದಿಗೆ ಶ್ರಾವಣ ಸಾಧನಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿಲ್ವಿಯಾ ಎ.ಆರ್ ಕ್ಯಾಸ್ಟಲಿನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಸ್ಟಿಫನ್ ವೇಗಸ್ ವಂದಿಸಿದರು. ಬಿಆರ್‌ಪಿ ನಾಗೇಶ್ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here