







ದೊಡ್ಡದಾಗಿ ಬೆಳೆದು ಸಾವಿರಾರು ಜನರಿಗೆ ನೆರಳು ನೀಡಲಿ- ಅಶೋಕ್ ಕುಮಾರ್ ರೈ ಕಮಿಂಟ್ಮೆಂಟ್ ಇದ್ದಾಗ ಸಂಸ್ಥೆ ಉತ್ತಮವಾಗಿ ನಡೆಯುತ್ತದೆ- ಜಿ.ಎಲ್. ಬಲರಾಮ ಆಚಾರ್ಯ
ಸಾವಿರಾರು ಮಂದಿಯ ಅನ್ನದ ಬಟ್ಟಲು ಬಿಂದು ಸಂಸ್ಥೆ- ಈಶ್ವರ ಭಟ್ ಪಂಜಿಗುಡ್ಡೆ


ಪುತ್ತೂರು: 1994ರಿಂದ ಹಣಕಾಸು ಸೇವಾ ಕ್ಷೇತ್ರದಲ್ಲಿ ಗ್ರಾಹಕರಿಗೆ ವಿಶ್ವಾಸಾರ್ಹ ಸಂಸ್ಥೆಯಾಗಿ, ಉತ್ತಮ ಸೇವೆಯೊಂದಿಗೆ ಕಲ್ಲಾರೆಯ ಶ್ರೀಗಣೇಶ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಕ್ಯಾಪಿಟಲ್ ಸಂಸ್ಥೆಯ ಪ್ರಧಾನ ಕಚೇರಿ ನವೀಕೃತಗೊಂಡು ಅ.16ರಂದು ಉದ್ಘಾಟನೆಗೊಂಡಿತು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ನವೀಕೃತ ಪ್ರಧಾನ ಕಚೇರಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ 3500 ಸಾವಿರ ಕೋಟಿ ರೂ. ವ್ಯವಹಾರ ಮಾಡುವ ಪುತ್ತೂರಿನ ವ್ಯಕ್ತಿ ದ.ಕ. ಜಿಲ್ಲೆಯಲ್ಲಿಯಲ್ಲಿಯೇ ಪ್ರಥಮ. ಆದುದರಿಂದ ಅವರನ್ನು ಹೊಗಳುವಂತಹ ವಾತಾವರಣ ನಿರ್ಮಾಣ ಮಾಡಿದ್ದಾರೆ. ನಾನು ವಿದ್ಯಾರ್ಥಿಗಳಿಗೆ ಭಾಷಣ ಮಾಡುವ ಸಂದರ್ಭದಲ್ಲಿ ಯಾವಾಗಲೂ ಸತ್ಯ ಶಂಕರ್ರವರ ಸಾಧನೆ ಹೇಳುತ್ತಿದ್ದೇನೆ. ನಡೆದು ಬಂದ ದಾರಿಯನ್ನು ಯಾವಾಗಲೂ ನೆನಪಿಸಿಕೊಳ್ಳುವ ಇವರು ಪುತ್ತೂರಿನಲ್ಲಿ ಇನ್ನೂ 1000 ಮಂದಿಗೆ ಉದ್ಯೋಗ ನೀಡಬೇಕು ಎಂಬುದು ನನ್ನ ಕನಸು ಆಗಿದೆ ಎಂದರು. ಉದ್ಯಮದಲ್ಲಿ ಸರಕಾರಕ್ಕೆ ಟ್ಯಾಕ್ಸ್ ಕಟ್ಟುವವರಿಗೆ ವಿಮೆ ನೀಡುವ ವ್ಯವಸ್ಥೆ ಸರಕಾರ ಮಾಡಬೇಕು. ವಿದ್ಯಾವಂತರು ಯುವ ಸಮೂಹ ರಾಜಕೀಯಕ್ಕೆ ಬಂದು ಬದಲಾವಣೆ, ಅಭಿವೃದ್ಧಿ ತರಬೇಕು ಎಂದ ಅವರು ಸಂಸ್ಥೆ ದೊಡ್ಡದಾಗಿ ಬೆಳೆದು ಸಾವಿರಾರು ಜನರಿಗೆ ನೆರಳು ನೀಡಲಿ ಎಂದರು.




ಕಮಿಂಟ್ಮೆಂಟ್ ಇದ್ದಾಗ ಸಂಸ್ಥೆ ಉತ್ತಮವಾಗಿ ನಡೆಯುತ್ತದೆ:
ಪುತ್ತೂರಿನ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನ ಆಡಳಿತ ನಿರ್ದೇಶಕ ಜಿ.ಎಲ್. ಬಲರಾಮ ಆಚಾರ್ಯ ಮಾತನಾಡಿ ಸಿಬ್ಬಂದಿಗಳಿಗೆ ಉತ್ತಮ ವ್ಯವಸ್ಥೆ ಮಾಡಿಕೊಟ್ಟು ಕೆಲಸ ಮಾಡಲು ಅಹ್ಲಾದಕರ ವಾತಾವರಣ ನಿರ್ಮಾಣ ಮಾಡಿದ್ದಾರೆ. ಫೈನಾನ್ಸ್ ಕಷ್ಟದ ಕ್ಷೇತ್ರ. ಕೊಟ್ಟ ಸಾಲ ಹಿಂದೆ ಬಂದರೆ ಮಾತ್ರ ಸಂಸ್ಥೆ ಅಭಿವೃದ್ಧಿ ಹೊಂದುತ್ತದೆ. ಸತ್ಯಶಂಕರ್ರವರು ಪ್ರತಿ ಕ್ಷಣ ವ್ಯವಹಾರದ ಬಗ್ಗೆಯೇ ಆಲೋಚನೆ ಮಾಡುತ್ತಿರುತ್ತಾರೆ. ಕಮಿಟ್ಮೆಂಟ್ ಹೊಂದಿರುವ ವ್ಯಕ್ತಿ. ಕಮಿಂಟ್ಮೆಂಟ್ ಇದ್ದಾಗ ಸಂಸ್ಥೆ ಉತ್ತಮ ರೀತಿಯಲ್ಲಿ ನಡೆಯುತ್ತದೆ ಎಂದ ಅವರು ಸಂಸ್ಥೆಯ ದೇಶ ದಾದ್ಯಂತ ಶಾಖೆ ಹೊಂದಿ ನಂಬರ್ ವನ್ ಆಗಿ ಬೆಳೆಯಲಿ ಎಂದರು.
ಸಾವಿರಾರು ಮಂದಿಯ ಅನ್ನದ ಬಟ್ಟಲು ಬಿಂದು ಸಂಸ್ಥೆ:
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ ಪುತ್ತೂರಿನಲ್ಲಿ ಗೋ ಸೇವೆಯ ಮೂಲಕ ಬಳಿಕ ಬೇರೆ ಬೇರೆ ಉದ್ಯಮದಲ್ಲಿ ತೊಡಗಿಸಿಕೊಂಡು ಭಾರತ ದೇಶದಲ್ಲಿ ಗುರುತಿಸಿಕೊಂಡ ಬಿಂದು ಸಂಸ್ಥೆಯ ಸತ್ಯಶಂಕರ್ರವರು ಉದ್ಯಮದಲ್ಲಿ ಸತ್ಯವನ್ನು ತೋರಿಸಿಕೊಟ್ಟಿದ್ದಾರೆ. ಉದ್ಯಮ ಹೆಚ್ಚು ಬಂದಾಗ ಉದ್ಯೋಗ ಸೃಷ್ಟಿಯಾಗುತ್ತದೆ. ಸಾವಿರಾರು ಮಂದಿಯ ಅನ್ನದ ಬಟ್ಟಲು ಬಿಂದು ಸಂಸ್ಥೆಯಾಗಿದೆ. ಸಮಾಜಕ್ಕೆ ಸದ್ದು ಇಲ್ಲದೆ ಸಹಾಯ ಮಾಡುವ ವ್ಯಕ್ತಿಯಾಗಿದ್ದಾರೆ ಎಂದ ಅವರು ಶ್ರೀಮಹಾಲಿಂಗೇಶ್ವರ ದೇವರು ಒಳಿತನ್ನು ಮಾಡಲಿ ಎಂದರು.
ಎಸ್.ಜಿ.ಗ್ರೂಫ್ನ ವ್ಯವಸ್ಥಾಪಕ ನಿರ್ದೇಶಕ ಸತ್ಯಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ 1994ರಲ್ಲಿ ಪ್ರವೀಣ್ ಫೈನಾನ್ಸ್ ಕಾರ್ಪೋರೇಶನ್ ಸಂಸ್ಥೆ ಆರಂಭ ಮಾಡಿದೆವು. ಆಗ ಬ್ಯಾಂಕ್ನಿಂದ ಲೋನ್ ಪಡೆಯಲು ಕಷ್ಟದ ಸಂದರ್ಭ ಇತ್ತು. ವಾಹನಗಳ ಖರೀದಿಗೆ ಉಪಯೋಗವಾಗಲು ಆರಂಭವಾದ ಈ ಸಂಸ್ಥೆ ಇಂದು ಕರ್ನಾಟಕದಾದ್ಯಂತ 25 ಶಾಖೆಗಳನ್ನು ಹೊಂದಿದ್ದು ತಿಂಗಳಿಗೆ ಸುಮಾರು 400 ಗ್ರಾಹಕರಿಗೆ ಸಾಲ ನೀಡುತ್ತಿದ್ದೇವೆ. ಒಟ್ಟು 8 ಸಾವಿರ ಗ್ರಾಹಕರು ನಮ್ಮೊಂದಿಗಿದ್ದು ಈ ವರ್ಷದಲ್ಲಿ 550 ಕೋಟಿ ರೂ. ವ್ಯವಹಾರದ ಸಾಧನೆಯ ಗುರಿ ಹೊಂದಿದ್ದೇವೆ. ಸುಮಾರು 200ಕ್ಕೂ ಮಿಕ್ಕಿ ಉದ್ಯೋಗಿಗಳು ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ ಎಂದರು.
ಎಸ್.ಜಿ.ಗ್ರೂಫ್ನ ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್, ಮೇಘಾ ಶಂಕರ್, ಮಹಿಮಾ ಶಂಕರ್, ಮನಸ್ವಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ಕಛೇರಿಯ ಸಿವಿಲ್ ಕೆಲಸ ನಿರ್ವಹಿಸಿರುವ ಸುದರ್ಶನ್, ಇಂಟೀರಿಯರ್ ಕೆಲಸ ನಿರ್ವಹಿಸಿರುವ ಪೂರ್ಣಿಮಾ, ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ. ಗೌರಿ ಪೈ, ಉದ್ಯಮಿ ಶಿವರಾಮ ಆಳ್ವ ಕುರಿಯ, ಎಸ್ಡಿಪಿ ರೆಮಿಡೀಸ್ನ ರೂಪಲೇಖ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹಾಗೂ ಗ್ರಾಹಕರಾದ ಅಬ್ದುಲ್ ರಝಾಕ್, ಸಂಜೀವ ಕಲ್ಲೇರಿ, ಅಬ್ದುಲ್ ಖಾದರ್ ಹಾಗೂ ಜಗದೀಶ್ ಅಮೀನ್ ರವರನ್ನು ಗೌರವಿಸಲಾಯಿತು.
ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸೀತಾರಾಮ ರೈ ಸವಣೂರು, ಜಿ.ಎಲ್. ಆಚಾರ್ಯ ಜ್ಯುವೆಲ್ರ್ಸ್ನ ನಿರ್ದೇಶಕರಾದ ಲಕ್ಷ್ಮೀಕಾಂತ ಆಚಾರ್ಯ, ಸುಧನ್ವ ಆಚಾರ್ಯ, ಎಸ್ಡಿಪಿ ರೆಮಿಡೀಸ್ನ ಡಾ.ಹರಿಕೃಷ್ಣ ಪಾಣಾಜೆ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ. ಪುತ್ತಿಲ ಪರಿವಾರ ಟ್ರಸ್ಟ್ ನ ಅರುಣ್ ಕುಮಾರ್ ಪುತ್ತಿಲ, ನಗರಸಭಾ ಮಾಜಿ ಸದಸ್ಯೆ ವಿದ್ಯಾ ಆರ್.ಗೌರಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ಶಿವಶಂಕರ್ ಭಟ್ ಬೋನಂತಾಯ, ಗೋವಿಂದರಾಜ್ ಪಿ., ಹರಿಕೃಷ್ಣ ವಾಟೆ, ರಮೇಶ್ ಭಟ್, ಡಾ.ಕೃಷ್ಣಪ್ರಸಾದ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಮುಖ್ಯ ಲೆಕ್ಕಪತ್ರ ಅಧಿಕಾರಿ ಹೇಮಂತ್ ಪೈ, ಡಿಜಿಎಂ ಶ್ರೀವತ್ಸರಾಜ್ ಎಮ್.ಜಿ., ಎಜಿಎಮ್ ಕಾರ್ತಿಕ್ ಎಸ್.ಎನ್. ಸೇರಿದಂತೆ ಸಿಬ್ಬಂದಿಗಳು ಸಹಕರಿಸಿದರು. ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಬೆಳ್ಳಿಪ್ಪಾಡಿ ಅಮೋಘ್ ಜೆ. ರೈ ವಂದಿಸಿದರು. ಚೇತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ದೊಡ್ಡ ಗುರಿ ಇಟ್ಟುಕೊಂಡರೆ ಯಶಸ್ಸು ಸಾಧ್ಯ 2030ಕ್ಕೆ ಕರ್ನಾಟಕದಾದ್ಯಂತ 100 ಶಾಖೆಗಳನ್ನು ಮಾಡುವ ಯೋಚನೆ ಇದ್ದು 1500 ಕೋಟಿ ರೂ. ವ್ಯವಹಾರ ಮಾಡುವ ಗುರಿ ಹೊಂದಿದ್ದೇವೆ. ದೊಡ್ಡ ಗುರಿ ಇಟ್ಟುಕೊಂಡರೆ ಯಾವುದೇ ಸಂಸ್ಥೆ ಯಶಸ್ಸು ಕಾಣಲು ಸಾಧ್ಯ. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವುದು ಅಗತ್ಯ. ವ್ಯವಹಾರದಲ್ಲಿ ನಿರಂತರತೆ ಹಾಗೂ ಉದ್ಯೋಗಿಗಳಿಗೆ ಭದ್ರತೆ ಮುಖ್ಯ. ಅಲ್ಲದೆ ಸಾಮಾಜಿಕ ಸೇವೆ, ಜನರ ಸಹಕಾರ ಮುಖ್ಯ. ಇದನ್ನು ಅಳವಡಿಸಿಕೊಂಡ ಕಾರಣ ನಮ್ಮ ಸಂಸ್ಥೆ ಅಭಿವೃದ್ಧಿ ಹೊಂದಿದೆ. ಸತ್ಯಶಂಕರ ಆಡಳಿತ ನಿರ್ದೇಶಕರು, ಎಸ್.ಜಿ. ಗ್ರೂಫ್
ದಸರಾ, ದೀಪಾವಳಿ ಆಫರ್ ಆಯೋಜನೆ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ಸಂಸ್ಥೆಯಲ್ಲಿ ವಿಶೇಷ ಆಫರ್ ಆಯೋಜಿಸಲಾಗಿದೆ. ಅಕ್ಟೋಬರ್ 1 ರಿಂದ ನವೆಂಬರ್ 30ರವರೆಗೆ ಆಫರ್ ಲಭ್ಯವಿದ್ದು ಗರಿಷ್ಠ ಹಣಕಾಸಿನ ನೆರವು, ಸುಲಭ ಸಾಲ ಸೌಲಭ್ಯ, ಶೀಘ್ರ ಅನುಮೋದನೆ ವ್ಯವಸ್ಥೆ ಗ್ರಾಹಕರಿಗೆ ದೊರೆಯಲಿದೆ. ಜತೆಗೆ ಅದೃಷ್ಟ ಕೂಪನ್ನ ಲಕ್ಕಿ ಡ್ರಾ ನಡೆಯಲಿದೆ. ಲಕ್ಕಿ ಡ್ರಾದಲ್ಲಿ ಸ್ಮಾರ್ಟ್ ಟಿವಿ, ಫ್ರಿಡ್ಜ್, ಮುಂತಾದ ಅನೇಕ ಆಕರ್ಷಕ ಬಹುಮಾನ ಗೆಲ್ಲುವ ಸುವರ್ಣಾವಕಾಶ ನಿಮ್ಮದಾಗಿಸಿಕೊಳ್ಳಬಹುದು ಎಂದು ಸಂಸ್ಥೆಯ ಸಿಇಒ ಹೇಳಿದರು.










