







ರಾಮಕುಂಜ: ಆಗಸ್ಟ್ 29ರಂದು ರಾಮಕುಂಜ ಶ್ರೀ ವಿಶ್ವೇಶತೀರ್ಥ ಸೌಧ ಸಭಾಂಗಣದಲ್ಲಿ ನಡೆದ ಕಡಬ ತಾಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಯವ್ಯಯ ಮಂಡನೆ, ಸ್ಮರಣ ಸಂಚಿಕೆ ‘ಪಂಚವರ್ಣ’ ಬಿಡುಗಡೆ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸುವ ಕುರಿತ ಪೂರ್ವಭಾವಿ ಸಭೆ ಅ.14ರಂದು ರಾಮಕುಂಜ ಶ್ರೀ ವಿಶ್ವೇಶ ತೀರ್ಥ ಸೌಧ ಸಭಾಂಗಣದಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಅಧ್ಯಕ್ಷ ಕೆ.ಸೇಸಪ್ಪ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರ ಸಹಕಾರದಿಂದ ಕಡಬ ತಾಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ನಡೆದಿದೆ. ಅದೇ ರೀತಿ ಕನ್ನಡ ರಾಜ್ಯೋತ್ಸವವನ್ನೂ ಸಂಭ್ರಮದಿಂದ ಆಚರಿಸಲಾಗುವುದು. ಈ ನಿಟ್ಟಿನಲ್ಲಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಸಹಕಾರ ನೀಡುವಂತೆ ಹೇಳಿದರು. ಈ ಸಂದರ್ಭದಲ್ಲಿ ಆಗಸ್ಟ್ 29ರಂದು ನಡೆದ ಕಡಬ ತಾಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ‘ಪಂಚವರ್ಣ’ ಬಿಡುಗಡೆಗೊಳಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ, ಕಡಬ ತಾಲೂಕು ಖಜಾಂಜಿ ಬಾಲಚಂದ್ರ ಮುಚ್ಚಿಂತಾಯ, ನಿಕಟಪೂರ್ವಾಧ್ಯಕ್ಷ ಪಿ.ಜನಾರ್ದನ ಗೌಡ ಕಡಬ, ಪ್ರಕಾಶ ಗೌಡ ಸಾನಿಧ್ಯ ರಾಮಕುಂಜ, ಎ.ಎನ್.ಕೊಳಂಬೆ, ಹರೀಶ್ ಆಚಾರ್ಯ ಎ., ಗಣೇಶ ಕಟ್ಟಪುಣಿ, ರಮೇಶ್ ಆರ್.ಬಿ., ಕರುಣಾಕರ ಯು.ರಾಮಕುಂಜ, ಆನಂದ ಎಸ್.ಟಿ., ಕೆ.ಯಶವಂತ ರೈ ಮತ್ತಿತರರು ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ.ಸ್ವಾಗತಿಸಿ ಆಯವ್ಯಯ ಮಂಡನೆ ಮಾಡಿದರು.












