







ಸ್ಮರ್ಧಾತ್ಮಕ ಪರೀಕ್ಷೆಗಳ ಅರಿವು ಅಗತ್ಯ: ಹರಿಪ್ರಸಾದ್ ಶೆಟ್ಟಿ


ಉಪ್ಪಿನಂಗಡಿ: ಇಂದಿನ ಬಹಳಷ್ಟು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವಿನ ಕೊರತೆ ಇದೆ. ಅದಡಿ ಸಲುವಾಗಿ ಕಾರ್ಯಕ್ರಮ ರೂಪಿಸುವುದು ಅತೀ ಅಗತ್ಯ ಎಂದು ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಹರಿಪ್ರಸಾದ್ ಬಿ. ಶೆಟ್ಟಿ ಹೇಳಿದರು.ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಆಂತರಿಕ ಗುಣಮಟ್ಟ ಭರವಸಾ ಕೋಶ, ಶಿಕ್ಷಕ-ರಕ್ಷಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ನಾವು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಸಂಸ್ಕೃತಿ, ಸಂಸ್ಕಾರ ಬೆಳೆಸುವಲ್ಲಿ ಪ್ರೇರಣಾದಾಯಕವಾಗಬೇಕು ಎಂದರು.
ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರವಿರಾಜ್ ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವಾಗ ದ್ವಿಚಕ್ರ ಹೊರತಾಗಿ ಕಾರು ಇತರೇ ವಾಹನಗಳನ್ನು ಕೊಡುವಂತದ್ದು, ಅದರಲ್ಲೂ ಅವರು ಲೈಸನ್ಸ್ ಹೊಂದಿರದೆ, ಹೆಲ್ಟೆಟ್ ಧರಿಸದೆ ವಾಹನ ಓಡಿಸುವಂತದ್ದು, ತಮ್ಮ ಮಕ್ಕಳ ಶಿಕ್ಷಣದ ದೃಷ್ಠಿಯಿಂದ ಮತ್ತು ಅಪಾಯದ ಕಾರಣದಿಂದಲೂ ಒಳಿತಲ್ಲ. ಈ ಬಗ್ಗೆ ಪೋಷಕರು ಜವಾಬ್ದಾರಿ ಹೊರಬೇಕು ಎಂದು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ಕಾಲೇಜಿನಲ್ಲಿ 28 ಮಂದಿ ಖಾಯಂ ಭೋದಕ ಉಪನ್ಯಾಸಕರಿದ್ದು, ವಿದ್ಯಾರ್ಥಿಗಳು ಪಾಠ-ಪ್ರವಚನ, ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಬಹಳ ಸಾಧನೆ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಇರುವ ವ್ಯವಸ್ಥೆಗಳು ಖಾಸಗಿ ಕಾಲೇಜಿಗೆ ಸರಿಸಾಟಿಯಾಗಿ ಇದ್ದು, ವರ್ಷದಿಂದ ವರ್ಷಕ್ಕೆ ಉತ್ತಮ ಫಲಿತಾಂಶ ಪಡೆಯುತ್ತಿದ್ದೇವೆ ಎಂದರು.



ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಡಾ. ರಾಜಾರಾಮ್ ಕೆ.ಬಿ., ಮಹಾಲಿಂಗೇಶ್ವರ ಭಟ್, ಕೃಷ್ಣರಾವ್, ಮಾತನಾಡಿದರು. ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜನಾ ಸಮಿತಿಯ ಸುರೇಶ್ ಜಿ.ಕೆ., ತೇಜಸ್ವಿ ಕುಮಾರ್, ಶ್ರೀಮತಿ ನೇಹಾ ಬಾನು, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಪೋಷಕರಾದ ಹರಿರಾಮಚಂದ್ರ, ಚಂದ್ರಶೇಖರ ಮಡಿವಾಳ, ನಾರಾಯಣ ಗೌಡ, ಅಬ್ದುಲ್ ಮಜೀದ್, ಭಾರತಿ, ಗೀತಾ ಮತ್ತಿತರ ಪ್ರಮುಖರನ್ನು ಒಳಗೊಂಡಂತೆ ಸುಮಾರು 300ಕ್ಕೂ ಮಿಕ್ಕಿ ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಹರಿಪ್ರಸಾದ್ ಸ್ವಾಗತಿಸಿದರು. ಉದಯಕುಮಾರ್ ಸಿ.ಆರ್. ವಂದಿಸಿದರು. ಮಂಜುನಾಥ ಬಿ.ಆರ್. ನಿರೂಪಿಸಿದರು.










