ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಸುಬ್ರಹ್ಮಣ್ಯ ಎಸ್ ಎಸ್ ಪಿ ಯು ಕಾಲೇಜಿನಿಂದ ಎನ್ ಎಸ್ ಎಸ್ ಶಿಬಿರಕ್ಕೆ ಚಾಲನೆ

0

ಕಾಣಿಯೂರು: ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ ಅ. 16ರಿಂದ ಅ.22ರವರೆಗೆ ನಡೆಯಲಿರುವ ಎನ್ಎಸ್ಎಸ್ ಶಿಬಿರಕ್ಕೆ ಅ 16ರಂದು ಚಾಲನೆ ನೀಡಲಾಯಿತು. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಅವರು ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಸುಬ್ರಹ್ಮಣ್ಯ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸೋಮಶೇಖರ್ ನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಕ್ಕಳಿಗೆ ಸೂಕ್ತ ಸಲಹೆಗಳನ್ನು ನೀಡಿ ಶುಭ ಹಾರೈಸಿದರು. ಪ್ರಗತಿ ಶಾಲಾ ಆಡಳಿತ ಮಂಡಳಿಯ ಸದಸ್ಯ ನಾಗೇಶ್ ರೈ ಮಾಳ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಮುಂಡಾಳ, ಮುಖ್ಯಗುರುಗಳಾದ ನಾರಾಯಣ ಭಟ್, ವಿನಯ ವಿ ಶೆಟ್ಟಿ, ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಗುಣವರ್ಧನ್ ಕೆದಿಲ ನಿರಂತರವಾಗಿ ಏಳು ದಿವಸಗಳ ಕಾಲ ನಡೆಯುವ ಎನ್ ಎಸ್ ಎಸ್ ಕ್ಯಾಂಪಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಬಾಲಕೃಷ್ಣ ಪರಮಲೆ ಮತ್ತು ಭವ್ಯಶ್ರೀ , ಘಟಕದ ನಾಯಕರಾದ ಅಭಿಲಾಶ್ ಎಂ ಆರ್, ಪಿ ಎನ್ ಚಿಂತನ್, ನಾಯಕಿ ರಚನಾ ಟಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಶಮ್ಯ ಪ್ರಾರ್ಥಿಸಿ, ಎನ್ ಎಸ್ ಎಸ್ ಘಟಕದ ನಾಯಕಿ ಸುದೀಕ್ಷಾ ಎಸ್ ಡಿ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿಗಳಾದ ಪೂರ್ಣಿಮಾ ಎನ್ ಸ್ವಾಗತಿಸಿ, ಸೌಮ್ಯಾ ಎ ವಂದಿಸಿದರು.

LEAVE A REPLY

Please enter your comment!
Please enter your name here