







ಪುತ್ತೂರು: ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿರುವ ಅತ್ಯಂತ ಕಾರಣಿಕತೆಯ ಶ್ರೀರಾಮ ಮಂದಿರದಲ್ಲಿ ನವರಾತ್ರಿ ಉತ್ಸವವು ಅತ್ಯಂತ ಸಂಭ್ರಮದಿಂದ ಜರಗುತ್ತಿದ್ದು 6 ನೇ ದಿನ ಉತ್ಸವದಲ್ಲಿ ಅ.16 ರಂದು ರಾತ್ರಿ ಓಲೆಮುಂಡೋವು ಭಾಸ್ಕರ ರೈ ಕಳ್ಳಿಮಾರು ಇವರ ಭಜನಾ ಸೇವೆ ಹಾಗೆ ಮುಂಡೂರು ಉದಯಗಿರಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.



ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿವೃತ್ತ ಸೈನಿಕ ರಘುನಾಥ ಶೆಟ್ಟಿ ಪಂಜಿಗುಡ್ಡೆಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಜೈದೀಪ್ ರೈ ಕೋರಂಗ ಸಾರಥ್ಯದಲ್ಲಿ ‘ ಕುಸಲ್ದ ಎಸಲ್’ ಸಾಂಸ್ಕೃತಿಕ ವೈಭವ ಮನರಂಜಿಸಿತು. ರಾತ್ರಿ ವಿಶೇಷ ಅನ್ನಸಂತರ್ಪಣೆ ನಡೆಯಿತು. ಊರ ಪರವೂರ ನೂರಾರು ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಮಂದಿರದ ಆಡಳಿತ ಸಮಿತಿ ಮತ್ತು ಭಜನಾ ಸಮಿತಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ 129 ಮನೆಯ ಭಜನಾ ಸೇವಾರ್ಥಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.




ಇಂದು ಶ್ರೀರಾಮ ಮಂದಿರದಲ್ಲಿ
ಅ.17 ರಂದು ರಾತ್ರಿ ನಾಲ ಕೃಷ್ಣ ರೈ ಮುಂಡಾಳಗುತ್ತು ಇವರ ಭಜನಾ ಸೇವೆ, ಕಡಬ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ನಾಟ್ಯಾಭಿಯೋಗಿ ನೃತ್ಯಶಾಲೆ ತಿಂಗಳಾಡಿ ಇದರ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮಂದಿರದ ಪ್ರಕಟಣೆ ತಿಳಿಸಿದೆ.










