ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ಹಲವಾರು ಬಹುಮಾನ : ಯೋಗಶಾರದೆ ಪ್ರಶಸ್ತಿಗೆ ಶ್ರೀಮಾ ಕೆ ಎಚ್ ಆಯ್ಕೆ

0

ಕಾಣಿಯೂರು: ವೀರ ಮಾರುತಿ ಸೇವಾ ಟ್ರಸ್ಟ್ (ರಿ) ಮೂಡಬಿದ್ರೆ ಶಾರದೋತ್ಸವ ಪ್ರಯುಕ್ತ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ಮತ್ತು ಯೋಗಾಸನ ಜ್ಞಾನ ಸ್ಪರ್ಧೆಯಲ್ಲಿ ಕಿರಿಯ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಲಾಸ್ಯ ಕೆ.ಎಂ 4ನೇ ದ್ವಿತೀಯ ಸ್ಥಾನ, ಹಿರಿಯ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಆಶ್ಲೇಷ್ ಕೆ ಎಂ 5ನೇ ದ್ವಿತೀಯ ಸ್ಥಾನ, ಹೈಸ್ಕೂಲ್ ವಿಭಾಗದಲ್ಲಿ ಶ್ರೀಮಾ ಕೆ .ಹೆಚ್ 10ನೇ ಪ್ರಥಮ ಸ್ಥಾನ, ಸಾನ್ವಿಕ ಎಚ್ 10ನೇ ದ್ವಿತೀಯ ಸ್ಥಾನ, ವನ್ಶಿ ಕೆ .ಎಂ 8ನೇ ಪಂಚಮ ಸ್ಥಾನ ಗಳಿಸಿರುತ್ತಾರೆ.
ಪ್ರಾಥಮಿಕ ವಿಭಾಗದ ಬಾಲಕಿಯರ ಆರ್ಟಿಸ್ಟಿಕ್ ಜೋಡಿ ಸ್ಪರ್ಧೆಯಲ್ಲಿ ಲಾಸ್ಯ ಕೆ.ಎಂ 4ನೇ ಮತ್ತು ಧೃತಿ ಎ 7ನೇ ತೃತೀಯ ಸ್ಥಾನ, ಬಾಲಕರ ವಿಭಾಗದ ಆರ್ಟಿಸ್ಟಿಕ್ ಜೋಡಿ ಸ್ಪರ್ಧೆಯಲ್ಲಿ ಆಶ್ಲೇಷ್ ಕೆ ಎಂ 5ನೇ ಮತ್ತು ಹಿತಾರ್ಥ್ ಕೆ ಜಿ 5ನೇ ದ್ವಿತೀಯ ಸ್ಥಾನ, ಹೈಸ್ಕೂಲ್ ವಿಭಾಗದ ಆರ್ಟಿಸ್ಟಿಕ್ ಜೋಡಿ ಸ್ಪರ್ಧೆಯಲ್ಲಿ ಸಾಕ್ಷಿ ಎ.ಜೆ 7ನೇ ಮತ್ತು ವನ್ಶಿ ಕೆ.ಎಂ 8ನೇ ದ್ವಿತೀಯ ಸ್ಥಾನ ಪಡೆದಿರುತ್ತಾರೆ.


ಯೋಗ ಸಾಮಾನ್ಯ ಜ್ಞಾನ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ಧೃತಿ. ಎ 7ನೇ ಪ್ರಥಮ, ವೈದ್ರಿತಿ ವಿ.ರೈ 7ನೇ ತೃತೀಯ ಸ್ಥಾನ, ಹೈಸ್ಕೂಲ್ ವಿಭಾಗದ ಯೋಗ ಜ್ಞಾನ ಸ್ಪರ್ಧೆಯಲ್ಲಿ ವನ್ಶಿ ಕೆ. ಎಂ 8ನೇ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಶ್ರೀಮಾ .ಕೆ. ಹೆಚ್ ಯೋಗ ಶಾರದೆ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಮಹಿಳೆಯರ ವಿಭಾಗದ ಯೋಗಾ ಸ್ಪರ್ಧೆಯಲ್ಲಿ ಸಂಸ್ಥೆಯ ಯೋಗ ಶಿಕ್ಷಕಿ ಶಶಿಕಲಾ .ಕೆ ಇವರು ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಉತ್ತಮ ಪ್ರದರ್ಶನದೊಂದಿಗೆ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.
ಸಂಸ್ಥೆಯ ಶಿಕ್ಷಕಿ ಚಿತ್ರಕಲಾ .ಟಿ ಸಹಕರಿಸಿರುತ್ತಾರೆ.

LEAVE A REPLY

Please enter your comment!
Please enter your name here