







ಪುತ್ತೂರು: ವಿಜಯ ಸಾಮ್ರಾಟ್ ನೇತೃತ್ವದಲ್ಲಿ ಪುತ್ತೂರಿನಲ್ಲಿ ಆಯೋಜಿಸಲಾದ ಪಿಲಿಗೊಬ್ಬು ಸೀಸನ್-4 ಕಾರ್ಯಕ್ರಮ ಅ.17ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ಪಿಲಿಗೊಬ್ಬಿನ ಜೊತೆಗೆ ನಡೆದ ಫುಡ್ ಫೆಸ್ಟ್ ನೋಡುಗರನ್ನು ಆಕರ್ಷಿಸಿದ್ದು, ಇಂದು ಕೂಡಾ ಫುಡ್ ಫೆಸ್ಟ್ ನಡೆಯಲಿದೆ.


50ಕ್ಕೂ ಅಧಿಕ ಆಹಾರ ಮಳಿಗೆಗಳು ಫುಡ್ ಫೆಸ್ಟ್ ನಲ್ಲಿ ಇದ್ದು, ರಾತ್ರಿ ವೇಳೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಬರ್ಗರ್, ಸ್ಯಾಂಡ್ ವಿಚ್, ವಿವಿಧ ಬಗೆಯ ದೋಸೆ, ಐಸ್ ಕ್ರೀಮ್, ಮಾಕ್ ಟೈಲ್ ಜ್ಯೂಸ್, ಮಟ್ಕಾ ಸೋಡಾ, ಕರಾವಳಿಯ ಖಾದ್ಯಗಳು ಸೇರಿದಂತೆ ವಿವಿಧ ರುಚಿಗಳನ್ನು ನೀಡಲಾಗುತ್ತಿದೆ. ಪ್ರತಿ ಮಳಿಗೆಯಲ್ಲಿ ಕಸದ ತೊಟ್ಟಿ ಇಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.



ಫುಡ್ ಫೆಸ್ಟ್ನಲ್ಲಿ ಯಾವೆಲ್ಲ ಮಳಿಗೆಗಳು ..
ಫುಡ್ಫೆಸ್ಟ್ ನಲ್ಲಿ ಶ್ರೇಷ್ಠಮಟ್ಟದ ಆಹಾರ ಮಳಿಗೆಗಳು ಪಾಲು ಪಡೆಯುತ್ತಿದ್ದು, ವಿಶಿಷ್ಟ ಬಗೆಯ ತಿಂಡಿ ತಿನಿಸುಗಳು, ಖಾದ್ಯಗಳನ್ನು ಪುತ್ತೂರಿನ ಜನತೆಗೆ ಪರಿಚಯಿಸುವುದು ಫುಡ್ ಫೆಸ್ಟ್ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಅನ್ನುತ್ತಿದ್ದಾರೆ ಸಂಘಟಕರು.
ಸುಮಾರು 50 ಮಳಿಗಳು ಫುಡ್ಫೆಸ್ಟ್ನಲ್ಲಿ ಇವೆ. ಪುತ್ತೂರ ಮುತ್ತು ಸ್ಪೆಷಲ್ ಚರುಂಬುರಿ ಆ್ಯಂಡ್ ಜ್ಯೂಸ್, ಕೋಕೋ ಲಶ್, ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ಕಲ್ಪರಸ, ಪುತ್ತೂರು ಡಿಲೈಟ್ಸ್ ಅ ಕಾಂತ್ ಭಟ್ ಹಲಸಿನ ಹಣ್ಣಿನ ತಿಂಡಿಗಳು, ಪ್ರಕೃತಿ ಲೈಮ್ ಸೋಡಾ, ಆರ್.ಆರ್ ಮೊಮೊಸ್, ಗಂಗಾ ಲೈಮ್ ಸೋಡಾ, ಪುತ್ತೂರ ಮುತ್ತು ಸ್ಪೆಷಲ್ ಪಾಲಕ್ ರುಮಾಲಿ ರೋಟಿ, ಮೋಜಿಟೋ ಆ್ಯಂಡ್ ಲೈಸ್ ಚಾಟ್, ನಾಯಕ್ಸ್ ಸ್ವೀಟ್ಸ್, ಶಿವಕೈಲಾಸ್ ಗೋಬಿಮಂಚೂರಿ ಸೆಂಟರ್, ಮೈಸೂರು ಸ್ಪೆಷಲ್ ಸ್ಪೆಷಲ್ ಗೋಬಿ, ಅವಿಲ್ ಮಿಲ್ಕ್, ಮಸಾಲ ಚಕ್ಕುಲಿ, ಚರುಂಬುರಿ, ಕೈಲಾಸ್ ಬೇಲ್ ಪುರಿ, ಶೋಭಿತ್ ಹಲಸಿನ ಹೋಳಿಗೆ, ಚಾಟ್ಸ್ ಗೋಬಿ ಸೆಂಟರ್, ಪ್ರಕೃತಿ ಪುಡ್ ಪೊಡಕ್ಟ್, ಮರಿಕೆ ನ್ಯಾಚುರಲ್, ಅಂಕಲ್ ಸ್ವೀಟ್ಸ್, ಶ್ರೀ ಮಹಾಲಿಂಗೇಶ್ವರ ಚಾಟ್ಸ್, ಲಲಿತಾ ಫುಡ್ ಪ್ರೊಡಕ್ಟ್, ಮರಿಕೆ ನ್ಯಾಚುರಲ್ ಐಸ್ ಕ್ರೀಮ್, ಪೊಟೋಟಾ ಟ್ವಿಸ್ಟರ್, ನೆನಪಿರಲಿ ಲೈಮ್ ಸೋಡಾ. ಆರ್ ಆರ್ ಮೊಮೊಸ್,ನಂದಿನಿ ಸ್ಟಾಲ್, ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ ಐಸ್ ಕ್ರೀಮ್ ಸಹಿತ ಹಲವು ಜ್ಯೂಸ್ ಗಳು ಫುಡ್ ಫೆಸ್ಟ್ನಲ್ಲಿ ವಿಶೇಷವಾಗಿ ಗ್ರಾಹಕರಿಗೆ ಹೊಸ ಸವಿರುಚಿಯ ಉಣ ಬಡಿಸುತ್ತಿದೆ. ಭೀಮ ಜ್ಯುವೆಲ್ಲರ್ಸ್, ಜೈ ತುಳುನಾಡ್ ಕೇಂದ್ರ ಸಮಿತಿಯಿಂದ ಬಲೆ ತುಲುಟ್ ಪುದರ್ ಬರೆಕಾ ಮಾಹಿತಿ, ಅಕ್ಷಯ್ ಕಾಲೇಜಿನಿಂದ ವಿವಿಧ ಮಾಹಿತಿ ನೀಡಲಾಗುತ್ತಿದೆ.










