







ಪುತ್ತೂರು: ಕೇರಳದಾದ್ಯಂತ ಸಂಚಲನ ಮೂಡಿಸಿದ್ದ ಕೊಚ್ಚಿ ಹೂಪರ್ ಕಾರು ಅಪಘಾತದಲ್ಲಿ ಮೃತಪಟ್ಟ ಸುಳ್ಯ ಕನಕಮಜಲು ನಿವಾಸಿ ಇಯಾಜ್ ಅವರ ಮನೆಗೆ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯು.ಟಿ. ಖಾದರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.


ಈಗಾಗಲೇ ಕೇರಳ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ತೆಗೆದುಕೊಂಡ ಕ್ರಮಕ್ಕೆ ಅಭಿನಂದನೆ ಸಲ್ಲಿಸಿದ್ದೇನೆ ಮತ್ತು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡುವಂತೆ ಸಮಾಲೋಚನೆ ನಡೆಸಿದ್ದೇನೆ ಎಂದು ಸಚಿವರು ತಿಳಿಸಿದರು.



ಮೃತ ಇಯಾಜ್ ಅವರ ತಂದೆ ಇಬ್ರಾಹಿಂ, ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ.ಮುಸ್ತಫಾ, ಕೆಪಿಸಿಸಿ ಮಾಜಿ ಸಂಯೋಜಕ ಎಸ್. ಸಂಶುದ್ದೀನ್, ಭೂ ನ್ಯಾಯ ಮಂಡಳಿ ಸದಸ್ಯ ಅಡ್ವೋಕೇಟ್ ಫವಾಝ್ ಕನಕಮಜಲು, ಶಹೀದ್ ಪಾರೆ, ಇಕ್ಬಾಲ್ ಕನಕಮಜಲು, ಇಕ್ಬಾಲ್ ಸುಣ್ಣಮೂಲೆ, ಮುಖಂಡರುಗಳಾದ ವಿಜಯ ಕುಮಾರ್ ನರಿಯೂರು, ಹೇಮನಾಥ್ ಶೆಟ್ಟಿ ಕುತ್ಯಾಳ, ಹಮೀದ್ ಸುಣ್ಣಮೂಲೆ, ಇಬ್ರಾಹಿಂ ಕಾಸಿಂ, ಇಬ್ರಾಹಿಂ ಪೆಲತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.










